ʼಸಲ್ಲಿ ಡೀಲ್ಸ್ʼ ಪ್ರಕರಣದ ಪ್ರಮುಖ ಆರೋಪಿ ಓಂಕಾರೇಶ್ವರ ಠಾಕೂರ್ ಗೆ ಜಾಮೀನು
ಹೊಸದಿಲ್ಲಿ: ʼಸಲ್ಲಿ ಡೀಲ್ಸ್ʼ ಆ್ಯಪ್ ಪ್ರಕರಣದ ಪ್ರಮುಖ ಆರೋಪಿ ಓಂಕಾರೇಶ್ವರ ಠಾಕೂರ್ ಗೆ ದೆಹಲಿ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿದೆ.
"ಮೊದಲ ಬಾರಿಯ ಆರೋಪಿ ಮತ್ತು ಸುಧೀರ್ಘ ಕಾಲದ ಸೆರೆವಾಸದಿಂದ ಆತನ ಒಟ್ಟಾರೆ ಕ್ಷೇಮಕ್ಕೆ ಧಕ್ಕೆ" ಉಂಟಾಗಬಹುದು ಎಂಬ ಕಾರಣಕ್ಕೆ ಜಾಮೀನು ನೀಡಲಾಗಿದೆ. ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪಂಕಜ್ ಕುಮಾರ್ ಈ ಸಂಬಂಧ ತೀರ್ಪು ನೀಡಿದ್ದಾರೆ.
ಹಲವು ಮಧ್ಯವರ್ತಿಗಳಿಂದ ಉತ್ತರ ಬಂದಿರುವುದು ಮತ್ತು ವಿಧಿವಿಜ್ಞಾನ ಪ್ರಯೋಗಾಲಯ ವರದಿ ನಿರೀಕ್ಷಿಸಲಾಗುತ್ತಿದೆ ಎನ್ನುವುದನ್ನು ಠಾಕೂರ್‍ಗೆ ಜಾಮೀನು ನಿರಾಕರಿಸಲು ಆಧಾರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಆರೋಪಿ ಎಫ್‍ಎಸ್‍ಎಲ್ ವರದಿಯ ಮೇಲೆ ಪರಿಣಾಮ ಬೀರಲಾಗದು ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಸಲ್ಲಿಸಿದ ಮತ್ತೊಂದು ಆರೋಪಪಟ್ಟಿಯಲ್ಲಿ ಠಾಕೂರ್ ಹೆಸರು ಇರುವುದರಿಂದ, ಠಾಕೂರ್ ಜೈಲಿನಿಂದ ತಕ್ಷಣ ಹೊರಹೋಗುವಂತಿಲ್ಲ.
ಮಧ್ಯಪ್ರೇಶದ ಇಂಧೋರ್ ನಲ್ಲಿರುವ ಆರೋಪಿಯ ಮನೆಯಿಂದ ಆತನನ್ನು ಈ ವರ್ಷದ ಆರಂಭದಲ್ಲಿ ಬಂಧಿಸಲಾಗಿತ್ತು. ಆ್ಯಪ್ ಸೃಷ್ಟಿಸಿ ಹಲವು ಮಂದಿ ಮುಸ್ಲಿಂ ಮಹಿಳೆಯರನ್ನು ಅನ್‍ಲೈನ್‍ನಲ್ಲಿ "ಹರಾಜು" ಮಾಡಲು ಮುಂದಾಗಿದ್ದ ಎಂಬ ಆರೋಪದಲ್ಲಿ ಈತನನ್ನು ಬಂಧಿಸಲಾಗಿತ್ತು. ದೆಹಲಿ ಹಾಗೂ ನೋಯ್ಡಾದಲ್ಲಿ ಈತನ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
Delhi court grants bail to Sulli Deals case accused Aumkareshwar Thakur, who was arrested by Special Cell. @ThePrintIndia
— Bismee Taskin (@MainaBismee) March 28, 2022