×
Ad

ಇಂಧನ ಬೆಲೆ ಮತ್ತೆ ಏರಿಕೆ: ದಿಲ್ಲಿಯಲ್ಲಿ 100 ರೂ. ಗಡಿ ದಾಟಿದ ಪೆಟ್ರೋಲ್ ದರ

Update: 2022-03-29 10:05 IST

ಹೊಸದಿಲ್ಲಿ: ಕಳೆದ ಎಂಟು ದಿನಗಳಲ್ಲಿ ಏಳನೇ ಬಾರಿ ಮಂಗಳವಾರ ಮತ್ತೆ ಇಂಧನ ಬೆಲೆ ಏರಿಕೆಯಾಗಿದೆ.

ರಾಜ್ಯ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ದಿಲ್ಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 80 ಪೈಸೆ ಹಾಗೂ  ಡೀಸೆಲ್ ಲೀಟರ್‌ಗೆ 70 ಪೈಸೆಗಳಷ್ಟು ಹೆಚ್ಚಿಸಲಾಗಿದೆ. ಈ ಮೂಲಕ ದಿಲ್ಲಿಯಲ್ಲಿ ಪೆಟ್ರೋಲ್ ದರ 100ರ ಗಡಿ ದಾಟಿದೆ.

ರಾಷ್ಟ್ರ ರಾಜಧಾನಿಯಲ್ಲಿ ಒಂದು ಲೀಟರ್ ಪೆಟ್ರೋಲ್  ಇದೀಗ ರೂ. 100.21 ಆಗಿದ್ದರೆ, ಡೀಸೆಲ್ ಲೀಟರ್‌ಗೆ ರೂ. 90.77 ರಿಂದ ರೂ. 91.47 ಕ್ಕೆ ಮಾರಾಟವಾಗಲಿದೆ.

ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ ರೂ. 115.04 ಕ್ಕೆ ಮಾರಾಟವಾಗಲಿದ್ದು, ಡೀಸೆಲ್ ಪ್ರತಿ ಲೀಟರ್‌ಗೆ ರೂ. 99.25 ಕ್ಕೆ ಮಾರಾಟವಾಗಲಿದೆ. ಮೆಟ್ರೋ ನಗರಗಳ ಪೈಕಿ  ಮುಂಬೈನಲ್ಲಿ ಇಂಧನ ದರಗಳು ಈಗಲೂ  ಹೆಚ್ಚಾಗಿದೆ. ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಕಾರಣದಿಂದಾಗಿ ರಾಜ್ಯಗಳಾದ್ಯಂತ ಬೆಲೆಗಳು ಬದಲಾಗುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News