"ಕ್ರಿಸ್ ರಾಕ್‌ ಗೆ ವಿಲ್ ಸ್ಮಿತ್ ಪಂಚ್ ಮಾಡಬೇಕು" ಎಂದಿದ್ದ 2016ರ ಟ್ವೀಟ್ ವೈರಲ್

Update: 2022-03-29 18:41 GMT

ಲಾಸ್ಏಂಜಲೀಸ್, ಮಾ.29: ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆ ಮೇಲೆಯೇ ಪ್ರಶಸ್ತಿ ಪುರಸ್ಕೃತ ನಟ ವಿಲ್ ಸ್ಮಿತ್, ಹಾಸ್ಯ ನಟ ಮತ್ತು ನಿರೂಪಕ ಕ್ರಿಸ್ ರಾಕ್ ಅವರಿಗೆ ಕಪಾಳಮೋಕ್ಷ ನಡೆಸಿದ ಪ್ರಕರಣದ ಪರ ಮತ್ತು ವಿರೋಧವಾಗಿ ಇಂಟರ್ನೆಟ್ನಲ್ಲಿ ಚರ್ಚೆ ಆರಂಭವಾಗಿರುವಂತೆಯೇ, 2016ರಲ್ಲಿ ಆಸ್ಕರ್ ಪ್ರಶಸ್ತಿ ಕಾರ್ಯಕ್ರಮಕ್ಕೆ ಸಂಬಂಧಿಸಿದ ಒಂದು ಟ್ವೀಟ್ ಈಗ ವೈರಲ್ ಆಗಿದೆ.

‌ಈ ಕಾರ್ಯಕ್ರಮವನ್ನೂ ಕ್ರಿಸ್ ರಾಕ್ ನಿರೂಪಿಸಿದ್ದರು. ಕಾರ್ಯಕ್ರಮಕ್ಕೆ ಸ್ಮಿತ್ ಅವರ ಪತ್ನಿ ಜಡಾ ಪಿಂಕೆಟ್ ಗೈರುಹಾಜರಾಗಿದ್ದರು. ಈ ಬಗ್ಗೆ ಕ್ರಿಸ್ರಾಕ್ ತಮಾಷೆ ಮಾಡಿದ್ದರು. 2016ರ ಫೆಬ್ರವರಿ 29ರಂದು ಈ ಬಗ್ಗೆ ಅಂತರ್ಜಾಲ ಬಳಕೆದಾರ ಜೇಸನ್ ‘ಸ್ಮಿತ್ ಈಗ ಕ್ರಿಸ್ರಾಕ್ ಅವರ ಮುಖಕ್ಕೆ ಗುದ್ದಬೇಕು. ಅವರಿಗೆ ಬೇರೆ ಆಯ್ಕೆ ಇಲ್ಲ’  ಎಂದು ಟ್ವೀಟ್ ಮಾಡಿದ್ದರು. ಇದೀಗ ತನ್ನ 2016ರ ಟ್ವೀಟ್ ಮತ್ತು ಸಂಬಂಧಿಸಿದ ಘಟನೆಯ ಯೂಟ್ಯೂಬ್ ವೀಡಿಯೊವನ್ನು ಜೇಸನ್ ಮತ್ತೊಮ್ಮೆ ಟ್ವೀಟ್ ಮಾಡಿದ್ದಾರೆ. 

ನಾಮಿನಿಗಳಲ್ಲಿ ವೈವಿಧ್ಯತೆಯಿಲ್ಲ ಎಂದು ಹೇಳಿ ಆ ಕಾರ್ಯಕ್ರಮಕ್ಕೆ ಪಿಂಕೆಟ್ ಗೈರಾಗಿದ್ದರು. ಆದರೆ ಅವರನ್ನು ಆಹ್ವಾನಿಸಿಯೇ ಇಲ್ಲ ಎಂದು ಕ್ರಿಸ್ರಾಕ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ಲಿಂಕೆಟ್ ತಮಾಷೆಗಳನ್ನು ಮೀರಿ ತಾನು ಮುನ್ನಡೆಯಲು ನಿರ್ಧರಿಸಿದ್ದೇನೆ ಎಂದಿದ್ದರು.

ಇದೀಗ 2016ರ ಟ್ವೀಟ್, ಸೋಮವಾರ ನಡೆದ ಕಪಾಳಮೋಕ್ಷದ ಘಟನೆಯನ್ನು ಹೋಲಿಸಿ ಅಂತರ್ಜಾಲ ಬಳಕೆದಾರರು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕಪಾಳಮೋಕ್ಷ ಘಟನೆಯ ಬಗ್ಗೆ ಆಸ್ಕರ್ ಅಕಾಡೆಮಿ ಔಪಚಾರಿಕ ವಿಮರ್ಶೆಯನ್ನು ಆರಂಭಿಸಿದೆ. ಕಪಾಳಮೋಕ್ಷ ಮಾಡಿದ್ದಕ್ಕೆ ಸ್ಮಿತ್ ಬಳಿಕ ರಾಕ್ ಅವರ ಕ್ಷಮೆ ಯಾಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News