ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ; ಒಂಬತ್ತು ದಿನಗಳಲ್ಲಿ ರೂ. 5.60ರಷ್ಟು ಹೆಚ್ಚಳ

Update: 2022-03-30 04:56 GMT
ಸಾಂದರ್ಭಿಕ ಚಿತ್ರ(PTI)

ಹೊಸದಿಲ್ಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಬುಧವಾರ ಮತ್ತೆ ಲೀಟರ್ ಗೆ 80 ಪೈಸೆಯಷ್ಟು ಏರಿಕೆ ಮಾಡಲಾಗಿದೆ. ಕಳೆದ ಒಂಬತ್ತು ದಿನಗಳಲ್ಲಿ ಇಂಧನ ಬೆಲೆ ಲೀಟರ್ ಗೆ ರೂ. 5.60ರಷ್ಟು ಏರಿಕೆಯಾಗಿದೆ.

ಪೆಟ್ರೋಲ್ ಬೆಲೆ ಈಗ ದಿಲ್ಲಿಯಲ್ಲಿ ಲೀಟರ್ ಗೆ ರೂ. 101.01 ಆಗಿದ್ದು ಮಂಗಳವಾರದ ತನಕ  ಬೆಲೆ ರೂ 100.21 ಆಗಿತ್ತು. ಡೀಸೆಲ್ ದರ ಈ ಹಿಂದೆ ರೂ 91.47 ಆಗಿದ್ದರೆ ಈಗ ರೂ 92.27 ಆಗಿದೆ.

ಇಂಧನ ಬೆಲೆ ದೇಶಾದ್ಯಂತ ಏರಿಕೆಯಾಗಿದ್ದರೂ ಆಯಾ ರಾಜ್ಯಗಳ ಸ್ಥಳೀಯ ತೆರಿಗೆಗಳನ್ನಾಧರಿಸಿ ದರಗಳಲ್ಲಿ ವ್ಯತ್ಯಾಸವಿದೆ. ನಾಲ್ಕೂವರೆ ತಿಂಗಳ ಅಂತರದ ನಂತರ ಮಾರ್ಚ್ 22ರಂದು ಇಂದನ ಬೆಲೆ ಏರಿಕೆ ಆರಂಭಗೊಂಡು ಸತತ ಒಂಬತ್ತನೇ ದಿನವೂ ಏರಿಕೆ ಕಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News