ದ.ಕ. ಜಿಲ್ಲೆ : ಎಸೆಸೆಲ್ಸಿ ದ್ವಿತೀಯ ಭಾಷಾ ಪರೀಕ್ಷೆಗೆ 220 ಮಂದಿ ಗೈರು
Update: 2022-03-30 14:55 IST
ಮಂಗಳೂರು : ದ.ಕ. ಜಿಲ್ಲೆಯಲ್ಲಿ 99 ಪರೀಕ್ಷಾ ಕೇಂದ್ರಗಳಲ್ಲಿ ಇಂದು ಎಸೆಸೆಲ್ಸಿಯ ದ್ವಿತೀಯ ಭಾಷಾ ಪರೀಕ್ಷೆ ಶಾಂತಿಯುತವಾಗಿ ನಡೆದಿದೆ.
ದ್ವಿತೀಯ ಭಾಷಾ ಪರೀಕ್ಷೆಗೆ ನೋಂದಾಯಿಸಿದ್ದ ಒಟ್ಟು 28351 ವಿದ್ಯಾರ್ಥಿಗಳಲ್ಲಿ 220 ಮಂದಿ ಗೈರಾಗಿದ್ದರು.
ಬಂಟ್ವಾಳ ವಲಯದಲ್ಲಿ ನೋಂದಾಯಿಸಿದ್ದ 5540 ವಿದ್ಯಾರ್ಥಿಗಳಲ್ಲಿ 37 ಮಂದಿ ಗೈರಾಗಿದ್ದರೆ, ಬೆಳ್ತಂಗಡಿಯಲ್ಲಿ 3963 ವಿದ್ಯಾರ್ಥಿಗಳಲ್ಲಿ 29, ಮಂಗಳೂರು ಉತ್ತರದಲ್ಲಿ 5150 ವಿದ್ಯಾರ್ಥಿಗಳಲ್ಲಿ 44, ಮಂಗಳೂರು ದಕ್ಷಿಣದಲ್ಲಿ 5233 ವಿದ್ಯಾರ್ಥಿಗಳಲ್ಲಿ 46, ಮೂಡಬಿದ್ರೆಯ 1793ರಲ್ಲಿ 9, ಪುತ್ತೂರಿನ 4780ರಲ್ಲಿ 31 ಮಂದಿ, ಸುಳ್ಯದ 1892ರಲ್ಲಿ 24 ಮಂದಿ ವಿದ್ಯಾರ್ಥಿಗಳು ಇಂದು ನಡೆದ ಪರೀಕ್ಷೆಗೆ ಗೈರಾಗಿದ್ದಾರೆ ಎಂದು ಡಿಡಿಪಿಐ ಸುಧಾಕರ್ ತಿಳಿಸಿದ್ದಾರೆ.