×
Ad

ಇಂಧನ ದರ ಏರಿಕೆಯೂ ಪ್ರಧಾನಿ ದಿನಚರಿ ಪಟ್ಟಿಗೆ ಸೇರಿದೆ: ರಾಹುಲ್ ಗಾಂಧಿ ವ್ಯಂಗ್ಯ

Update: 2022-03-30 23:22 IST

ಹೊಸದಿಲ್ಲಿ, ಮಾ. 30: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ದರ ಏರಿಕೆ, ರೈತರು ಅಸಹಾಯಕರಾಗುವಂತೆ ಮಾಡುವುದು ಹಾಗೂ ಯುವಕರಿಗೆ ಉದ್ಯೋಗದ ಸುಳ್ಳು ಕನಸುಗಳನ್ನು ತೋರಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ದಿನಚರಿಯ ಪಟ್ಟಿಯಲ್ಲಿ ಸೇರಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಸಂಬಂಧ ‘‘ರೋಝ್ ಸುಭಾಕೀಬಾತ್’’ ಹ್ಯಾಷ್ ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ವಿವಿಧ ವಿಷಯಗಳ ಕುರಿತಂತೆ ಪ್ರಧಾನಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘‘ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ದರವನ್ನು ಎಷ್ಟು ಪ್ರಮಾಣದಲ್ಲಿ ಏರಿಕೆ ಮಾಡಬೇಕು, ಜನರ ವೆಚ್ಚದ ಬಗೆಗಿನ ಚರ್ಚೆಯನ್ನು ಹೇಗೆ ನಿಲ್ಲಿಸಬೇಕು, ಯುವಕರಲ್ಲಿ ಹೇಗೆಲ್ಲಾ ಉದ್ಯೋಗದ ಸುಳ್ಳು ಕನಸುಗಳನ್ನು ಬಿತ್ತಬೇಕು, ಯಾವ ಸರಕಾರಿ ಕಂಪೆನಿಗಳನ್ನು ಮಾರಾಟ ಮಾಡಬೇಕು ಹಾಗೂ ರೈತರನ್ನು ಹೇಗೆ ಹೆಚ್ಚು ಅಸಾಹಾಯಕರನ್ನಾಗಿ ಮಾಡಬೇಕು ಎಂಬುದು ಪ್ರಧಾನಿ ಅವರ ದಿನಚರಿ ಪಟ್ಟಿ’’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News