ತಾಲೂಕುಗಳಲ್ಲಿ ನೇತ್ರ ಪರೀಕ್ಷಾ ಶಿಬಿರ
Update: 2022-04-01 20:30 IST
ಮಂಗಳೂರು : ದ.ಕ. ಜಿಲ್ಲಾ ಸಂಚಾರ ನೇತ್ರ ಘಟಕ ಹಾಗೂ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಆಶ್ರಯದಲ್ಲಿ ಜಿಲ್ಲೆಯ ತಾಲೂಕುಗಳಲ್ಲಿ 11 ದಿನಗಳ ಕಾಲ ನೇತ್ರ ಪರೀಕ್ಷಾ ಶಿಬಿರವನ್ನು ಆಯೋಜಿಸಲಾಗಿದೆ.
ಎ.೫ರಂದು ಬೆಳಗ್ಗೆ ೮ಕ್ಕೆ ಬಂಟ್ವಾಳ ತಾಲೂಕಿನ ಕೇಪುವಿನಲ್ಲಿ, ಎ.೮ರಂದು ಬೆಳಗ್ಗೆ ೮ಕ್ಕೆ ಬಂಟ್ವಾಳ ತಾಲೂಕಿನ ಕುಕ್ಕೆಪದವಿನಲ್ಲಿ, ಎ.೧೨ ರಂದು ಬೆಳಗ್ಗೆ ೭:೩೦ಕ್ಕೆ ಪುತ್ತೂರಿನ ಸತ್ಯಸಾಯಿ ಮಂದಿರದಲ್ಲಿ, ಎ.೧೯ರಂದು ಬೆಳಗ್ಗೆ ೭:೩೦ಕ್ಕೆ ಬಂಟ್ವಾಳದ ಸಿದ್ದಕಟ್ಟೆಯಲ್ಲಿ, ಎ.೨೨ರಂದು ಬೆಳಗ್ಗೆ ೭:೩೦ಕ್ಕೆ ಪುತ್ತೂರು ತಾಲೂಕಿನ ಸವಣೂರಿನಲ್ಲಿ, ಎ.೨೬ರ ಬೆಳಗ್ಗೆ ೭:೩೦ಕ್ಕೆ ಪಾಣಾಜೆ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ, ಎ.೨೯ ರಂದು ಬೆಳಗ್ಗೆ ೮ಕ್ಕೆ ಬಂಟ್ವಾಳ ತಾಲೂಕಿನ ವಿಟ್ಲ ಅಡ್ಯನಡ್ಕದಲ್ಲಿ ನೇತ್ರ ಪರೀಕ್ಷಾ ಶಿಬಿರ ನಡೆಸಲಾಗುವುದು ಎಂದು ವೆನ್ಲಾಕ್ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.