ಕಪಾಳಮೋಕ್ಷ ಪ್ರಕರಣ: ಆಸ್ಕರ್ಸ್ ಅಕಾಡೆಮಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ವಿಲ್ ಸ್ಮಿತ್

Update: 2022-04-02 07:54 GMT

ಲಾಸ್ ಏಂಜೆಲಿಸ್: ಕಳೆದ ವಾರಾಂತ್ಯದಲ್ಲಿ ಆಸ್ಕರ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರೂಪಕ, ಕಾಮಿಡಿಯನ್ ಕ್ರಿಸ್ ರಾಕ್ ಅವರಿಗೆ ಕಪಾಳಮೋಕ್ಷಗೈದ ಅತ್ಯುತ್ತಮ ನಟ ಪ್ರಶಸ್ತಿ ವಿಜೇಟ ವಿಲ್ ಸ್ಮಿತ್ ಅವರು   ಆಸ್ಕರ್ಸ್ ಅಕಾಡೆಮಿಗೆ ರಾಜೀನಾಮೆ ನೀಡಿದ್ದಾರೆ.

"ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಎಂಡ್ ಸಾಯನ್ಸಸ್ ಇದರ ಸದಸ್ಯತ್ವದಿಂದ ನಾನು ರಾಜೀನಾಮೆ ನೀಡುತ್ತಿದ್ದೇನೆ ಹಾಗೂ ಮಂಡಳಿಯು ನನ್ನ ವಿರುದ್ಧ ಸೂಕ್ತವೆನಿಸಿ ಕೈಗೊಳ್ಳುವ ಕ್ರಮಗಳನ್ನು ಸ್ವೀಕರಿಸುತ್ತೇನೆ" ಎಂದು  ವಿಲ್ ಸ್ಮಿತ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕ್ರಿಸ್ ರಾಕ್ ಅವರು ತಮ್ಮ ಪತ್ನಿ ಜಡಾ ಪಿಂಕೆಟ್ ಅವರ ತಲೆಗೂದಲಿನ ಕುರಿತಂತೆ ಅಪಹಾಸ್ಯ ಮಾಡಿದ್ದಾರೆಂದು ಆಕ್ರೋಶಗೊಂಡು ವಿಲ್ ಸ್ಮಿತ್ ಅವರಿಗೆ ಕಪಾಳಮೋಕ್ಷಗೈದಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಸ್ಮಿತ್ "94ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನನ್ನ ಕೃತ್ಯ ಆಘಾತಕಾರಿ ಹಾಗೂ ಅಕ್ಷಮ್ಯಾರ್ಹ" ಎಂದು ಹೇಳಿದ್ದಾರೆ.

"ನಾನು ಕ್ರಿಸ್, ಅವರ ಕುಟುಂಬ ನನ್ನ ಆತ್ಮೀಯ ಸ್ನೇಹಿತರು, ಪ್ರೀತಿಪಾತ್ರರು, ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಮತ್ತು ಜಾಗತಿಕವಾಗಿ ಕಾರ್ಯಕ್ರಮ ನೋಡಿದವರೆಲ್ಲರಿಗೂ ನೋವುಂಟು ಮಾಡಿದ್ದೇನೆ" ಎಂದು  ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿ ತಮ್ಮ ಕೃತ್ಯಕ್ಕೆ ವಿಷಾದಿಸಿದ್ದಾರೆ.

ವಿಲ್ ಸ್ಮಿತ್ ಅವರ ಪತ್ನಿ ಜಡಾ ಪಿಂಕೆಟ್ ಅವರು ಕೂದುಲುದುರುವಿಕೆಯ ಸಮಸ್ಯೆಯುಂಟು ಮಾಡುವ ಅಲೋಪೇಶಿಯಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News