ನವರಾತ್ರಿ ಹಿನ್ನೆಲೆ ಹಸಿ ಮಾಂಸ ಮಾರಾಟಕ್ಕೆ ನಿಷೇಧ ಹೇರಿದ ಗಾಝಿಯಾಬಾದ್ ಮುನಿಸಿಪಲ್ ಕಾರ್ಪೊರೇಷನ್

Update: 2022-04-02 15:38 GMT
Photo : PTI

ಹೊಸದಿಲ್ಲಿ: ಉತ್ತರ ಪ್ರದೇಶದ ಗಾಝಿಯಾಬಾದ್ ಮುನಿಸಿಪಲ್ ಕಾರ್ಪೊರೇಷನ್ ನವರಾತ್ರಿಯ ಹಿನ್ನೆಲೆಯಲ್ಲಿ ಎಪ್ರಿಲ್ 2ರಿಂದ 10ರ ತನಕ ನಗರದಲ್ಲಿ ಹಸಿ ಮಾಂಸ ಮಾರಾಟವನ್ನು ನಿಷೇಧಿಸಿದೆ. ಇದು ಪ್ರತಿ ವರ್ಷ ಜಾರಿಗೊಳಿಸಲಾಗುವ ಸಾಮಾನ್ಯ ಆದೇಶವಾಗಿದೆ ಎಂದು ಮುನಿಸಿಪಲ್ ಕಾರ್ಪೊರೇಷನ್ ಹೇಳಿದೆ.

‘‘ದೇವಸ್ಥಾನಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಹಾಗೂ ನಗರದಲ್ಲಿ ಈ ಅವಧಿಯಲ್ಲಿ ಮಾಂಸದ ಅಂಗಡಿಗಳು ಮುಚ್ಚಬೇಕು,’’ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ತಮ್ಮ ಕ್ಷೇತ್ರದಲ್ಲಿ ಹಲವರು ರೆಸ್ಟಾರೆಂಟ್‌ಗಳು ತೆರೆದಿರಿಸಲಾಗಿರುವ ಮಾಂಸವನ್ನು ಮಾರಾಟ ಮಾಡುತ್ತಿವೆ ಎಂದು ದೂರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ಸ್ಥಳೀಯ ಬಿಜೆಪಿ ಶಾಸಕ ನಂದ್ ಕಿಶೋರ್ ಗುರ್ಜರ್ ಮಾರ್ಚ್ 31ರಂದು ಪತ್ರ ಬರೆದಿದ್ದರು. ರೋಗಗಳ ಹರಡುವಿಕೆ ತಡೆಯಲು ಇಂತಹ ರೆಸ್ಟಾರೆಂಟ್‌ಗಳ ವಿರುದ್ಧ ಕ್ರಮಕೈಗೊಳ್ಳಬೇಕಲು ಎಂದು ಶಾಸಕ ಆಗ್ರಹಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News