ರೈತರ ಮೇಲೆ ಸಚಿವರ ಪುತ್ರ ಕಾರು ಹರಿಸಿದ ಪ್ರಕರಣ: ಸುಪ್ರೀಂ ಕೋರ್ಟ್‌ ಗೆ ಹೇಳಿಕೆ ನೀಡಿದ ಉತ್ತರಪ್ರದೇಶ ಸರಕಾರ

Update: 2022-04-04 07:38 GMT

ಹೊಸದಿಲ್ಲಿ: ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಸಹಾಯಕ ಗೃಹ ಸಚಿವ ಅಜಯ್‌ ಮಿಶ್ರಾ ಪುತ್ರ ಆಶಿಶ್‌ ಮಿಶ್ರಾ ಕಾರು ಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಆತನಿಗೆ ಜಾಮೀನು ನೀಡಲಾಗಿತ್ತು. ಈ ಜಾಮೀನನ್ನು ಪ್ರಶ್ನಿಸಿ ಸಂತ್ರಸ್ತ ಕುಟುಂಬಗಳು ಸುಪ್ರೀಂಕೋರ್ಟ್‌ ಗೆ ಅರ್ಜಿ ಹಾಕಿತ್ತು. ಈ ಬಗ್ಗೆ ಸುಪ್ರೀಂ ಕೋರ್ಟ್‌ ಉತ್ತರಪ್ರದೇಶ ಸರಕಾರದಿಂದ ಉತ್ತರ ನಿರೀಕ್ಷಿಸಿದ್ದು, "ಆತನದ್ದು ಗಂಭೀರ ಅಪರಾಧವೇ ಆದರೂ, ಆತ ಪಲಾಯನಗೈಯುವ ಸಾಧ್ಯತೆಯಿಲ್ಲ" ಎಂದು ಉತ್ತರಿಸಿದ್ದಾಗಿ ವರದಿಯಾಗಿದೆ. 

ಅಪರಾಧವು "ಗಂಭೀರವಾಗಿದೆ" ಎಂದು ಪ್ರತಿಪಾದಿಸಿದ ರಾಜ್ಯ ಸರ್ಕಾರವು ಅದನ್ನು ಖಂಡಿಸಲು "ಯಾವುದೇ ಪದಗಳು ಸಾಕಾಗುವುದಿಲ್ಲ" ಎಂದು ನ್ಯಾಯಾಲಯಕ್ಕೆ ತಿಳಿಸಿತು. ಹೈಕೋರ್ಟ್‌ನಲ್ಲಿ ಜಾಮೀನನ್ನು "ಕಟುವಾಗಿ" ವಿರೋಧಿಸಿದೆ ಎಂದು ಅದು ವಾದಿಸಿದೆ.

ಇದರ ಜೊತೆಗೆ, ಆಶಿಶ್‌ ಮಿಶ್ರಾ ಈ ಪ್ರಕರಣದ ತನಿಖೆ ಮುಗಿಯದೇ ವಿದೇಶಗಳಿಗೆ ಪಲಾಯನ ಮಾಡಲು ಸಾಧ್ಯವಿಲ್ಲ ಹಾಗೂ ಪ್ರಕರಣದ ಸಾಕ್ಷಿಗಳಿಗೆ ಯಾವುದೇ ತೊಂದರೆಗಳಾಗದಂತೆ ಅವರಿಗೆ ಭದ್ರತೆಯನ್ನು ಒದಗಿಸಲಾಗಿದೆ ಎಂದು ಉತ್ತರಪ್ರದೇಶ ಸರಕಾರ ತನ್ನ ಸಲ್ಲಿಕೆಯಲ್ಲಿ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News