×
Ad

ಶಾಲಾ ಅಕ್ರಮ ನೇಮಕಾತಿ ಪ್ರಕರಣ: ಮೇಲ್ಮನವಿ ವಿಚಾರಣೆಯಿಂದ ಹಿಂದೆ ಸರಿದ ಕಲ್ಕತ್ತಾ ಹೈಕೋರ್ಟ್ ಪೀಠ

Update: 2022-04-05 11:53 IST

ಕೋಲ್ಕತ್ತಾ: ಈಗ ನಡೆಯುತ್ತಿರುವ ಶಾಲಾ ಬೋಧಕೇತರ ಸಿಬ್ಬಂದಿ ಅಕ್ರಮ ನೇಮಕಾತಿ ಪ್ರಕರಣಕ್ಕೆ  ಸಂಬಂಧಿಸಿದ ಮೇಲ್ಮನವಿಯ ವಿಚಾರಣೆಯಿಂದ ಕಲ್ಕತ್ತಾ ಹೈಕೋರ್ಟ್ ವಿಭಾಗೀಯ ಪೀಠ ಸೋಮವಾರ ಹಿಂದೆ ಸರಿದಿದೆ. ಆ ನಂತರ ಮೂರು ಇತರ ಪೀಠಗಳು ಕೂಡ ಅರ್ಜಿಯ ವಿಚಾರಣೆಗೆ ನಿರಾಕರಿಸಿದವು.  ಹೀಗಾಗಿ ನಾಲ್ವರು  ಮೇಲ್ಮನವಿದಾರರು ವಿಚಾರಣೆ ಎದುರಿಸಲು  ಸಿಬಿಐ ಕಚೇರಿಗೆ ಹೋಗಲೇಬೇಕಾಯಿತು.

ರಾಜ್ಯದ ಅನುದಾನಿತ ಶಾಲೆಗಳಲ್ಲಿನ ಅಕ್ರಮ ನೇಮಕಾತಿಗಳ ಕುರಿತು ಸಿಬಿಐ ವಿಚಾರಣೆಗೆ ಸ್ವತಃ ಲಭ್ಯವಾಗುವಂತೆ ಏಕ ಪೀಠದ ಆದೇಶದ ವಿರುದ್ಧ ರಾಜ್ಯ ನೇಮಿಸಿದ ಸಮಿತಿಯ ನಾಲ್ವರು ಸದಸ್ಯರು ಮೇಲ್ಮನವಿ ಸಲ್ಲಿಸಿದ್ದರು. ಪಿ.ಕೆ. ಬಂಡೋಪಾಧ್ಯಾಯ, ಸಮರ್ಜಿತ್ ಆಚಾರ್ಯ, ಅಲೋಕ್ ಕುಮಾರ್ ಸರ್ಕಾರ್ ಮತ್ತು ಟಿ ಪಂಜಾ ಅವರು ಕಲ್ಕತ್ತಾ ಹೈಕೋರ್ಟ್ ವಿಭಾಗೀಯ ಪೀಠವು ಸೋಮವಾರ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ನಿಗದಿಪಡಿಸಿರುವ ಕಾರಣ  ಕಳೆದ ಶನಿವಾರ ಸಿಬಿಐ ವಿಚಾರಣೆಗೆ ಗೈರು ಹಾಜರಾಗಿದ್ದರು.

ಆದರೆ ನ್ಯಾಯಮೂರ್ತಿ ಹರೀಶ್ ಟಂಡನ್ ಹಾಗೂ  ನ್ಯಾಯಮೂರ್ತಿ ರವೀಂದ್ರನಾಥ ಸಾಮಂತ ಅವರನ್ನೊಳಗೊಂಡ ವಿಭಾಗೀಯ ಪೀಠವು ಮೇಲ್ಮನವಿ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿಯಿತು. ಪೀಠವು ಸರಕಾರಿ ಶಾಲೆಗಳಲ್ಲಿ ನೇಮಕಾತಿಗೆ ಸಂಬಂಧಿಸಿದ ಎಲ್ಲಾ 11 ಅರ್ಜಿಗಳನ್ನು ಬಿಡುಗಡೆ ಮಾಡಿದೆ.

"ವೈಯಕ್ತಿಕ ಆಧಾರದ ಮೇಲೆ ಈ ವಿಷಯವನ್ನು ತೆಗೆದುಕೊಳ್ಳಲು ನಾವು ಒಲವು ತೋರುವುದಿಲ್ಲ" ಎಂದು ಪೀಠದ ಪರವಾಗಿ ನ್ಯಾಯಮೂರ್ತಿ ಟಂಡನ್ ಹೇಳಿದರು.

ಕಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ ಅವರು ವಿಭಾಗೀಯ ಪೀಠವು ತಮ್ಮ ಆದೇಶಗಳಿಗೆ ವಿಧಿಸಿದ ತಡೆಯಾಜ್ಞೆಗಳನ್ನು ತೆರೆದ ನ್ಯಾಯಾಲಯದಲ್ಲಿ ಪ್ರಶ್ನಿಸಿದ ಮೂರು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ಅವರ ದೂರನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಮತ್ತು ಕಲ್ಕತ್ತಾ ಹೈಕೋರ್ಟ್  ಸಿಜೆ ಪ್ರಕಾಶ್ ಶ್ರೀವಾಸ್ತವ ಅವರಿಗೆ ರವಾನಿಸುವಂತೆ ನ್ಯಾಯಾಲಯದ ಆಡಳಿತವನ್ನು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News