ಎರಡನೇ ಬಾರಿಗೆ ಅಂತಾರಾಷ್ಟ್ರೀಯ ಗ್ರ್ಯಾಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಭಾರತದ ರಿಕ್ಕಿ ಕೇಜ್‌

Update: 2022-04-05 06:36 GMT
ರಿಕ್ಕಿ ಕೇಜ್‌ (PTI)

ಲಾಸ್ ವೇಗಸ್: ದಿ ರೆಕಾರ್ಡಿಂಗ್ ಅಕಾಡೆಮಿ ನೀಡುವ ಪ್ರತಿಷ್ಠಿತ ಗ್ರ್ಯಾಮಿಸ್ ಪ್ರಶಸ್ತಿ ವಿಜೇತರಲ್ಲಿ ಭಾರತೀಯರೊಬ್ಬರೂ ಸೇರಿದ್ದಾರೆ. ಭಾರತ ಮೂಲದ ಸಂಗೀತ ಸಂಯೋಜಕ ರಿಕ್ಕಿ ಕೇಜ್ ಅವರು ರಾಕ್ ಸಂಗೀತಗಾರ ಸ್ಟಿವಾರ್ಟ್ ಕೋಪ್‍ಲ್ಯಾಂಡ್ ಅವರೊಂದಿಗೆ ಬೆಸ್ಟ್ ನ್ಯೂ ಏಜ್ ಆಲ್ಬಂ ಪ್ರಶಸ್ತಿಯನ್ನು 'ಡಿವೈನ್ ಟೈಡ್ಸ್'ಗಾಗಿ ಹಂಚಿಕೊಂಡಿದ್ದಾರೆ. ಇದು ರಿಕ್ಕಿ ಕೇಜ್ ಅವರಿಗೆ ದೊರೆತ ಎರಡನೇ ಗ್ರ್ಯಾಮಿ ಪ್ರಶಸ್ತಿಯಾಗಿದೆ.

ಪ್ರಶಸ್ತಿ ಪಡೆಯಲು ವೇದಿಕೆ ಪ್ರವೇಶಿಸುತ್ತಿದ್ದಂತೆಯೇ ಸಭಿಕರಿಗೆ ರಿಕ್ಕಿ ಅವರು ಕೈಮುಗಿದು ಸಭಿಕರಿಗೆ 'ನಮಸ್ತೆ' ಹೇಳಿದರು.

ಪ್ರಶಸ್ತಿ ಪಡೆದ ನಂತರ ರಿಕ್ಕಿ ಅವರು ತಾವು ಸ್ಟಿವಾರ್ಟ್ ಕೋಪ್‍ಲ್ಯಾಂಡ್ ಜತೆಗಿರುವ ಚಿತ್ರವನ್ನು ಶೇರ್ ಮಾಡಿ ಪ್ರಶಸ್ತಿ ಪಡೆದ ಬಗ್ಗೆ ಸಂತಸ ಹಂಚಿಕೊಂಡು ಇದು ತಮ್ಮ ಎರಡನೇ ಮತ್ತು ಸ್ಟಿವಾರ್ಟ್ ಕೋಪ್‍ಲ್ಯಾಂಡ್ ಅವರ  ಆರನೇ ಪ್ರಶಸ್ತಿ ಎಂದು ಹೇಳಿಕೊಂಡರು.

ಪ್ರಶಸ್ತಿ ವಿಜೇತ 'ಡಿವೈನ್ ಟೈಡ್ಸ್' ಅನ್ನು ಲಹರಿ ಮ್ಯೂಸಿಕ್ ನಿರ್ಮಿಸಿದೆ. ರಿಕ್ಕಿ ತೇಜ್ ಅವರು ಅಮೆರಿಕಾದಲ್ಲಿ ಹುಟ್ಟಿದವರಾಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.

ಅವರು ತಮ್ಮ ಮೊದಲ ಗ್ರ್ಯಾಮಿ ಪ್ರಶಸ್ತಿಯನ್ನು 'ವಿಂಡ್ಸ್ ಆಫ್ ಸಂಸಾರ'ಕ್ಕಾಗಿ 2015ರಲ್ಲಿ ಪಡೆದಿದ್ದರು. ಅವರು ಸುಮಾರು 20 ದೇಶಗಳಲ್ಲಿ 100ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News