ವಿದ್ಯುತ್ ದರ ಏರಿಕೆ ಗಾಯದ ಮೇಲೆ ಬರೆ: ವರೋನಿಕಾ
Update: 2022-04-05 20:33 IST
ಉಡುಪಿ : ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ಮುಂತಾದ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ ನಡುವೆ ಇದೀಗ ರಾಜ್ಯದ ಜನತೆಗೆ ವಿದ್ಯುತ್ ದರ ಪ್ರತಿ ಯೂನಿಟ್ ವಿದ್ಯುತ್ ಬೆಲೆಯನ್ನು ಸರಾಸರಿ ೩೫ ಪೈಸೆ ಏರಿಕೆಯನ್ನು ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೆಲಿಯೋ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಜವಾದ ವಿಚಾರದಲ್ಲಿ ಜನರ ಪರವಾಗಿರಬೇಕಾಗಿದ್ದ ಸರಕಾರ ಇಂದು ಹಿಜಾಬ್, ಹಲಾಲ್ ಎಂಬ ವಿಷಯ ಹಿಡಿದುಕೊಂಡು ರಾಜ್ಯದಲ್ಲಿ ಅರಾಜಕತೆ ಯನ್ನು ಸೃಷ್ಟಿಸುತ್ತಿದೆ. ಸಾಮಾನ್ಯ ಜನರ ಆಶೋತ್ತರಗಳಿಗೆ ಸ್ಪಂದಿಸು ವಲ್ಲಿ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಜನರ ಜೇಬಿಗೆ ಕತ್ತರಿ ಹಾಕುವ ಹುನ್ನಾರವನ್ನು ನಡೆಸಿವೆ. ಮುಂಬರುವ ಚುನಾವಣೆ ಯಲ್ಲಿ ಜನರಿಗೆ ತಕ್ಕಪಾಠ ಕಲಿಸಲು ಸಜ್ಜಾಗಿದ್ದಾರೆ ಎಂದು ಅವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.