​ಮಂಗಳೂರು: ಕುಟುಂಬ ವೈದ್ಯರ ಸಂಘಟನೆಗೆ 20 ವರ್ಷ, ನೂತನ ಅಧ್ಯಕ್ಷರಾಗಿ ಡಾ. ಕುಲಾಲ್ ಆಯ್ಕೆ

Update: 2022-04-08 06:38 GMT
ಡಾ. ಕುಲಾಲ್

ಮಂಗಳೂರು : 20 ವರ್ಷಗಳ ಹಿಂದೆ ಕುಟುಂಬ ವೈದ್ಯಕೀಯ ಪದ್ಧತಿಯನ್ನ ನಗರ ಭಾಗದಲ್ಲಿ ಉಳಿಸಲು ಡಾ. ಮೋಹನ್ ದಾಸ್ ಭಂಡಾರಿ, ಡಾ. ಕುಡ್ವಾ, ಡಾ. ಅಣ್ಣಯ್ಯ ಕುಲಾಲ್, ಡಾ. ಜಿಕೆ ಭಟ್, ಡಾ. ಅಶೋಕ್ ಭಟ್, ಡಾ. ಪೊಳನಾಯ, ಡಾ. ಕುಮಾರ ಸ್ವಾಮಿ, ಡಾ. ಅಶೋಕ್ ಶೆಟ್ಟಿ, ಡಾ. ಕೆ ಬಿ ಶೆಟ್ಟಿ ಸಹಿತ ಸುಮಾರು 75 ಮಂದಿ ವೈದ್ಯರು ಸ್ಥಾಪಿಸಿದ ಸಂಸ್ಥೆಗೆ ಈಗ 20 ವರ್ಷ, ಆದರ ಮಹಾಸಭೆ ಇತ್ತೀಚಿಗೆ ಜರುಗಿ, ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಸ್ಥಾಪಕ ಕಾರ್ಯದರ್ಶಿ, ಮಾಜಿ ಅಧ್ಯಕ್ಷರೂ ಆಗಿದ್ದ ಡಾ. ಎಂ ಅಣ್ಣಯ್ಯ ಕುಲಾಲ್ ಉಳ್ತೂರು 20 ನೇ ವರ್ಷದ ನೂತನ ಅಧ್ಯಕ್ಷರನ್ನಾಗಿ, ಡಾ ವಿವೇಕಾನಂದ ಭಟ್ ಅವರನ್ನ ಕಾರ್ಯದರ್ಶಿಯವರನ್ನಾಗಿ, ಡಾ ಜಿ ಕೆ ಭಟ್ ಸಂಕಬಿತ್ತಿಲು ಅವರನ್ನ ಕೋಶಾಧಿಕಾರಿ ಯನ್ನಾಗಿ ಅವಿರೋಧವಾಗಿ ಆರಿಸಿ, ಎಲ್ಲಾ ಮಾಜಿ ಅಧ್ಯಕ್ಷರು ಗಳನ್ನ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆರಿಸಲಾಯಿತು.

ನಂತರ ನಡೆದ ವೈದ್ಯಕೀಯ ಕಾರ್ಯಾಗಾರದಲ್ಲಿ ನಗರದ ಖ್ಯಾತ ವೈದ್ಯ ಡಾ ಅಶ್ವಿನಿ ಪೊಳನಾಯ ಅವರು ರೇಡಿಯೋಲಜಿ ವಿಭಾಗದಲ್ಲಿಯ ಅತ್ಯಾದುನಿಕ ಚಿಕಿತ್ಸ ವಿಧಾನಗಳ ಬಗ್ಗೆ ಮಾಹಿತಿ ಕೊಟ್ಟರು, ಅಗಲಿದ ನಾಯಕ ಮಾಜಿ ಅಧ್ಯಕ್ಷರು ಆದ ಡಾ. ಮುಲ್ಕಿ ಅಚ್ಚುತ ಕುಡ್ವಾ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.

ನಮ್ಮನ್ನ ಅಗಲಿದ ಸ್ಥಾಪಕ ಅಧ್ಯಕ್ಷರು ಆಗಿದ್ದ ಡಾ ಮೋಹನ್ ದಾಸ್ ಭಂಡಾರಿ ಅವರ ಹೆಸರಲ್ಲಿ ಪ್ರತೀ ವರ್ಷ ಆಗಸ್ಟ್ ತಿಂಗಳಲ್ಲಿ ಸ್ಥಾಪಕರ ದಿನಾಚರಣೆ ಮತ್ತು ದತ್ತಿ ಉಪನ್ಯಾಸ ಅವರ ಕುಟುಂಬದವರ ಸಹಕಾರ ದೊಂದಿಗೆ ನಡೆಸಲು ತೀರ್ಮಾನಿಸಲಾಯಿತು.

ನಶಿಸುತ್ತಿರುವ ಕುಟುಂಬ ವೈದ್ಯ ಪದ್ದತಿಯನ್ನ ಉಳಿಸಲು, ಮೆಡಿಕಲ್ ಕಾಲೇಜು ಗಳ ಎಂಬಿಬಿಎಸ್ ವಿದ್ಯಾರ್ಥಿಗಳನ್ನ ಕುಟುಂಬ ವೈದ್ಯ ಪದ್ಧತಿಯತ್ತ ಸೆಳೆಯಲು, ರಾಜ್ಯ ಮಟ್ಟದ ಎಲ್ಲಾ ಕುಟುಂಬ ವೈದ್ಯ ಸಂಘಟನೆ ಗಳು, ಐಎಂಎ ಕುಟುಂಬ ವೈದ್ಯರ ಘಟಕದ ಸಹಕಾರ ದೊಂದಿಗೆ ಒಂದು ರಾಜ್ಯ ಮಟ್ಟದ ಕಾರ್ಯಾಗಾರ ಮಾಡಲು ತೀರ್ಮಾನಿಸಲಾಯಿತು.

ವೈದ್ಯಕೀಯ ಸೇವೆಯಲ್ಲಿ 50 ವರ್ಷ ಪೂರೈಸಿದ ಸಹಪಾಠಿ ಗಳಾದ ಡಾ ಪೊಳನಾಯ ಹಾಗೂ ಡಾ ಮುಕುಂದ್ ಅವರುಗಳನ್ನ ಗುರುತಿಸಿ ಗೌರವಿಸಲಾಯಿತು. ಇತ್ತೀಚಿಗೆ ರಾಜ್ಯ ಬರಹಗಾರರ ಬಳಗದಿಂದ ಸಮಾಜ ಮುಖೀ ಸೇವೆಗೆ ರಾಜ್ಯ ವೈದ್ಯ ಬ್ರಹ್ಮ ಪ್ರಶಸ್ತಿ ಪಡೆದ ಡಾ ಅಣ್ಣಯ್ಯ ಕುಲಾಲ್ ಅವರಿಗೆ ಸಂಫಟನೆ ಪರವಾಗಿ ಗೌರವ ಅಭಿನಂದನೆಗಳನ್ನ ಸಲ್ಲಿಸಲಾಯಿತು. ನಗರದ ಹಿರಿಯ ಕಿರಿಯ ಕುಟುಂಬ ವೈದ್ಯರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News