×
Ad

ಎ.10ರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಬೂಸ್ಟರ್ ಪಡೆಯಲು ಮುಕ್ತ ಅವಕಾಶ

Update: 2022-04-09 07:12 IST
ಫೈಲ್‌ ಫೋಟೊ

ಹೊಸದಿಲ್ಲಿ: ಮಹತ್ವದ ನಡೆಯೊಂದರಲ್ಲಿ ಕೇಂದ್ರ ಸರ್ಕಾರ ಬೂಸ್ಟರ್ ಡೋಸ್ ಅಥವಾ ಮುನ್ನೆಚ್ಚರಿಕೆ ಡೋಸ್ ನೀಡಿಕೆಯ ಕೇಂದ್ರಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿದೆ.

ಎಪ್ರಿಲ್ 10ರಿಂದ ಜನಸಾಮಾನ್ಯರು ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಶುಲ್ಕ ನೀಡಿ ಮುಕ್ತವಾಗಿ ಕೋವಿಡ್-19 ಲಸಿಕೆಗಳನ್ನು ಪಡೆಯಬಹುದಾಗಿದೆ. ಇದುವರೆಗೆ ದೇಶಾದ್ಯಂತ 2.4 ಕೋಟಿ ಮಂದಿ ಈಗಾಗಲೇ ಮುನ್ನೆಚ್ಚರಿಕೆ ಡೋಸ್‍ಗಳನ್ನು ಸರ್ಕಾರದ ಯೋಜನೆಯಡಿ ಪಡೆದಿದ್ದಾರೆ.

ಹಾಲಿ ಜಾರಿಯಲ್ಲಿರುವ ಉಚಿತ ಲಸಿಕೆ ಯೋಜನೆಯಡಿ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟವರಿಗೆ ಮೊದಲ, ಎರಡನೇ ಹಾಗೂ ಬೂಸ್ಟರ್ ಡೋಸ್‍ಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಇದರ ವೇಗ ಹೆಚ್ಚಿಸಲಾಗುವುದು ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ.

ಎರಡನೇ ಡೋಸ್ ಪಡೆದು ಒಂಬತ್ತು ತಿಂಗಳು ಪೂರ್ಣಗೊಂಡವರು ಮಾತ್ರವೇ ಮುನ್ನೆಚ್ಚರಿಕೆ ಡೋಸ್ ಪಡೆಯಲು ಅರ್ಹರಾಗಿರುತ್ತಾರೆ. ಮುನ್ನೆಚ್ಚರಿಕೆ ಡೋಸ್‍ನ ವ್ಯಾಖ್ಯೆ ಹಿಂದಿನಂತೆಯೇ ಮುಂದುವರಿಯಲಿದೆ ಅಂದರೆ ವಿವಿಧ ಡೋಸ್‍ಗಳನ್ನು ನೀಡುವಾಗ ಭಿನ್ನ ಲಸಿಕೆಗಳನ್ನು ನೀಡಲು ಅವಕಾಶವಿಲ್ಲ.

ಭಾರತ ಇದುವರೆಗೆ 185 ಕೋಟಿ ಕೋವಿಡ್-19 ಲಸಿಕಾ ಡೋಸ್‍ಗಳನ್ನು ನೀಡಿದೆ ಎಂದು ಕೋವಿನ್ ಡ್ಯಾಷ್‍ಬೋರ್ಡ್‍ನಿಂದ ತಿಳಿದುಬರುತ್ತದೆ. ಈ ಪೈಕಿ ಕೋವಿಶೀಲ್ಡ್ ಶೇಕಡ 83.3ರಷ್ಟಿದ್ದರೆ, ಕೊವ್ಯಾಕ್ಸಿನ್‍ನ ಪಾಲು ಶೇಕಡ 16ರಷ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News