ಸಿಎಎ ಕುರಿತ ನಿಬಂಧನೆಗಳನ್ನು ರೂಪಿಸಲು ಇನ್ನೂ 6 ವಾರ ಸಮಯಾವಕಾಶ ಕೋರಿದ ಕೇಂದ್ರ ಸರಕಾರ

Update: 2022-04-09 08:18 GMT

ಹೊಸದಿಲ್ಲಿ: ಸಂಸತ್ತಿನ ಎರಡೂ ಸದನಗಳು 2019ರಲ್ಲಿ ಅನುಮೋದನೆ ನೀಡಿದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯಿದೆ ಇದರನ್ವಯ ನಿಬಂಧನೆಗಳನ್ನು ರೂಪಿಸಲು ಇನ್ನೂ ಆರು ವಾರಗಳ ಸಮಯಾವಕಾಶವನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಕೇಳಿದೆ.

ಈ ಕಾಯಿದೆಯನ್ವಯ ಅಫ್ಗಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಮುಸ್ಲಿಮೇತರ ಅಲ್ಪಸಂಖ್ಯಾತರು ಭಾರತವನ್ನು ಡಿಸೆಂಬರ್ 31, 2014 ಅಥವಾ ಅದಕ್ಕಿಂತ ಮುಂಚೆ ಪ್ರವೇಶಿಸಿದರೆ  ಅವರು ಭಾರತೀಯ ಪೌರತ್ವವನ್ನು ಶೀಘ್ರ ಪಡೆಯಲು ಅರ್ಹರಾಗುತ್ತಾರೆ. ಆದರೆ ನಿಯಮಗಳನ್ನು ರೂಪಿಸದೆ ಯಾವುದೇ ಕಾನೂನು ಜಾರಿಗೊಳಿಸುವಂತಿಲ್ಲ. ಸಾಮಾನ್ಯವಾಗಿ ಆರು ತಿಂಗಳೊಳಗೆ ನಿಯಮಗಳನ್ನು ರೂಪಿಸಲಾಗುತ್ತದೆ. 

ಆದರೆ ಈ ವಿವಾದಿತ ಕಾನೂನು ಕುರಿತಂತೆ ನಿಯಮಗಳನ್ನು ರೂಪಿಸಲು ಸಮಯ ವಿಸ್ತರಣೆಯುನ್ನು ಸಚಿವಾಲಯ ಕೇಳುತ್ತಿರುವುದು ಇದು ಐದನೇ ಬಾರಿಯಾಗಿದೆ. ಜನವರಿ 2ರಂದು ಕೇಂದ್ರ ಸರಕಾರವು ಮೂರು ತಿಂಗಳ ವಿಸ್ತರಣೆ ಕೇಳಿತ್ತಲ್ಲದೆ ಕೋವಿಡ್ ಸಾಂಕ್ರಾಮಿಕದ ನೆಪವನ್ನು ಮುಂದೊಡ್ಡಿತ್ತು. ಈ ಬಾರಿ ಅಕ್ಟೋಬರ್ 9ರವರೆಗೆ ಸಮಯಾವಕಾಶ ಕೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News