ಉಕ್ರೇನ್ ಜತೆಗಿನ ಶಾಂತಿ ಮಾತುಕತೆಗೆಳು 'ಡೆಡ್ ಎಂಡ್' ತಲುಪಿವೆ ಎಂದ ಪುಟಿನ್

Update: 2022-04-13 14:29 GMT
ವ್ಲಾದಿಮಿರ್ ಪುಟಿನ್ (PTI)

ಮಾಸ್ಕೋ: ಉಕ್ರೇನ್ ಜೊತೆಗಿನ ಶಾಂತಿ ಮಾತುಕತೆಗಳು ಡೆಡ್ ಎಂಡ್ ತಲುಪಿವೆ ಹಾಗೂ ನಮ್ಮ ದೇಶ ತನ್ನ 'ಉದಾತ್ತ ಗುರಿಗಳನ್ನು' ಸಾಧಿಸಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.

ಉತ್ತರ ಉಕ್ರೇನ್‍ನಿಂದ ರಷ್ಯಾದ ಪಡೆಗಳು ವಾಪಸ್ ಸರಿದ ನಂತರ ಮೊದಲ ಬಾರಿ ಸಾರ್ವಜನಿಕ ಭಾಷಣ ಮಾಡಿದ ಪುಟಿನ್ ಮೇಲಿನಂತೆ ಹೇಳಿದ್ದಾರೆ.

ಉಕ್ರೇನ್‍ನ ಬುಚಾದಲ್ಲಿ ರಷ್ಯಾ ಯುದ್ಧಾಪರಾಧಗಳನ್ನು ಎಸಗಿದೆ ಎಂಬ ಆರೋಪಗಳನ್ನು ಅಲ್ಲಗಳೆದ ಪುಟಿನ್,  ಪೂರ್ವ ಉಕ್ರೇನ್‍ನ ರಷ್ಯಾ ಭಾಷಿಕರನ್ನು ರಕ್ಷಿಸುವ ಸಲುವಾಗಿ ಹಾಗೂ ಆ ಪ್ರದೇಶ ಮಾಸ್ಕೋದ ವೈರಿಗಳಿಗೆ ರಷ್ಯಾ ವಿರೋಧಿ ಸ್ಪ್ರಿಂಗ್ ಬೋರ್ಡ್ ಆಗುವುದನ್ನು ತಡೆಯಲು ಯುದ್ಧ ಮುಂದುವರಿಯಬೇಕಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News