ಬಹುನಿರೀಕ್ಷಿತ ಸಿನೆಮಾ 'ಕೆಜಿಎಫ್ -2' ಬಿಡುಗಡೆ

Update: 2022-04-13 23:39 GMT
'ಕೆಜಿಎಫ್ -2' ಚಿತ್ರದ ಪೋಸ್ಟರ್

ಬೆಂಗಳೂರು: ಯಶ್ ನಟನೆಯ ಬಹುನಿರೀಕ್ಷಿತ ಸಿನೆಮಾ ಕೆಜಿಎಫ್ ಚಾಪ್ಟರ್ -2 ಚಿತ್ರ ಕೊನೆಗೂ ತೆರೆಕಂಡಿದೆ. 

ಮಧ್ಯರಾತ್ರಿಯಿಂದಲೇ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿರುವ ಸಿನೆಮಾವನ್ನು ಸ್ವಾಗತಿಸಲು ಅಭಿಮಾನಿಗಳು ಬಾರೀ ಸಿದ್ಧತೆ ನಡೆಸಿದ್ದು, ಚಿತ್ರಮಂದಿರಗಳ ಹೊರಭಾಗದಲ್ಲಿ ನಟ ಯಶ್ ಅವರ ಕಟೌಟ್ ಹಾಗೂ ಪೋಸ್ಟರ್ ಗಳು ಕಂಡು ಬಂದಿದೆ.

ಇನ್ನು ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್,  'ಚಿತ್ರ ರಿಲೀಸ್ ಆದ ಮೇಲೆ ಯಾರೂ ಕೂಡ ಚಿತ್ರದ ವಿಡಿಯೋ ತುಣುಕು ಮತ್ತು ಫೋಟೋಗಳನ್ನು ಆನ್ ಲೈನ್ ನಲ್ಲಿ ಹಂಚಿಕೊಳ್ಳಬೇಡಿ ' ಎಂದು ಅಭಿಮಾನಿಗಳಲ್ಲಿ  ಮನವಿ ಮಾಡಿಕೊಂಡಿದ್ದಾರೆ. 

ಬುಧವಾರ ಚಿತ್ರದ ಇನ್ನೊಂದು ಹಾಡು ಬಿಡುಗಡೆಯಾಗಿದ್ದು,  ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಇಂಗ್ಲಿಷನ್‌ನಲ್ಲಿ  ಬಿಡುಗಡೆಯಾಗಿದೆ. ಹಾಡು ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ ಲಕ್ಷಗಟ್ಟಲೆ ಜನರು ಇದನ್ನು ವೀಕ್ಷಿಸಿದ್ದರು.

ಭಾರತದಲ್ಲಿಯೇ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿರುವ ಸಿನೆಮಾಕ್ಕೆ ಪ್ರೇಕ್ಷಕರಿಂದ ಯಾವ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News