ಥಿಯೇಟರ್​ನಲ್ಲಿ ಯಡವಟ್ಟು: KGF-2 ಬದಲು KGF-1 ಬಿಡುಗಡೆ!

Update: 2022-04-14 10:50 GMT
ಕೆಜಿಎಫ್ -2 ಚಿತ್ರದ ಪೋಸ್ಟರ್

ಬೆಂಗಳೂರು: ಯಶ್ ನಟನೆಯ ಬಹು ನಿರೀಕ್ಷಿತ ಸಿನೆಮಾ ಕೆಜಿಎಫ್ -2 ಬುಧವಾರ ಮಧ್ಯರಾತ್ರಿ ಎಲ್ಲೆಡೆ ತೆರೆ ಕಂಡಿದ್ದು, ಬೆಂಗಳೂರಿನ ಥಿಯೇಟರ್‌ ಒಂದರಲ್ಲಿ ಸಿಬ್ಬಂದಿಯ ಯಡವಟ್ಟಿನಿಂದಾಗಿ ಕೆಜಿಎಫ್‌ ಚಾಪ್ಟರ್ 2  ಬದಲಿಗೆ ಚಾಪ್ಟರ್- 1 ಪ್ರದರ್ಶನಗೊಂಡಿರುವ ಪ್ರಸಂಗ ನಡೆದಿದೆ.

ಸಿನೆಮಾ ವೀಕ್ಷಣೆಗೆ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳು ಸುಮಾರು 20 ನಿಮಿಷ ಕೆಜಿಎಫ್ ಚಾಪ್ಟರ್- 1 ಸಿನೆಮಾ  ವೀಕ್ಷಿಸಿ ಥಿಯೇಟರ್‌ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ತಾಂತ್ರಿಕ ಸಮಸ್ಯೆಯಿಂದಾಗಿ ಹೀಗಾಗಿದೆ ಎಂದು ವೀಕ್ಷಕರಿಗೆ ಸಿಬ್ಬಂದಿ  ಸ್ಪಷ್ಟನೆ ಕೊಟ್ಟಿದ್ದಾರೆ. ಬಳಿಕ 40 ನಿಮಿಷ ತಡವಾಗಿ ಕೆಜಿಎಫ್ ಚಾಪ್ಟರ್- 2 ಸಿನೆಮಾ ಪ್ರದರ್ಶನ ಆರಂಭವಾಗಿದೆ ಎಂದು ತಿಳಿದು ಬಂದಿದೆ. 

ಇನ್ನು ಮಧ್ಯರಾತ್ರಿಯಿಂದಲೇ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿರುವ ಕೆಜಿಎಫ್ -2  ಸಿನೆಮಾವನ್ನು ಸ್ವಾಗತಿಸಲು ಬೆಂಗಳೂರು ನಗರದ ಹಲವೆಡೆ ಅಭಿಮಾನಿಗಳು ಭಾರೀ ಸಿದ್ಧತೆ ನಡೆಸಿದ್ದು, ಚಿತ್ರಮಂದಿರಗಳ ಹೊರಭಾಗದಲ್ಲಿ ನಟ ಯಶ್ ಅವರ ಕಟೌಟ್ ಹಾಗೂ ಪೋಸ್ಟರ್ ಗಳು ಕಂಡು ಬಂತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News