ಹಿ.ಪ್ರ. ಬಿಜೆಪಿಯ ಕನಿಷ್ಠ 1,000 ನಾಯಕರು ಆಪ್ ಸೇರಲಿದ್ದಾರೆ: ಮನೀಶ್ ಸಿಸೋಡಿಯಾ

Update: 2022-04-14 17:59 GMT

ಹೊಸದಿಲ್ಲಿ, ಎ. 14: ಹಿಮಾಚಲಪ್ರದೇಶದ ಬಿಜೆಪಿಯ ಕನಿಷ್ಠ 1,000 ಸ್ಥಳೀಯ ನಾಯಕರು ಶೀಘ್ರ ಆಮ್ ಆದ್ಮಿ ಪಕ್ಷ (ಆಪ್)ಸೇರಲಿದ್ದಾರೆ. ರಾಜ್ಯದ ಹಲವು ಪ್ರಮುಖ ನಾಯಕರು ಕೂಡ ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷದೊಂದಿಗೆ ಸಂಪರ್ಕ ಇರಿಸಿಕೊಂಡಿದ್ದಾರೆ ಎಂದು ದಿಲ್ಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಗುರುವಾರ ಹೇಳಿದ್ದಾರೆ.

ಹಿಮಾಚಲಪ್ರದೇಶದಲ್ಲಿ ಪಕ್ಷಾಂತರ ಆಡಳಿತ ಪಕ್ಷವನ್ನು ಛಿದ್ರಗೊಳ್ಳುವಂತೆ ಮಾಡಿದೆ ಎಂದು ಪ್ರತಿಪಾದಿಸಿದ ಸಿಸೋಡಿಯಾ, ಇಲ್ಲಿ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನ ಸಭೆ ಚುನಾವಣೆಯಲ್ಲಿ ಆಪ್ ಜಯ ಗಳಿಸಿ ಸರಕಾರ ರಚಿಸಲಿದೆ ಎಂದರು.

‘‘ಧಿಮನ್ ಜಿ ಅವರು ಜಿಲ್ಲಾ ಮಟ್ಟದ 20 ನಾಯಕರೊಂದಿಗೆ ಪಕ್ಷಕ್ಕೆ ಸೇರಿದ್ದಾರೆ. ಈಗ ಬಿಜೆಪಿಯ ಜಿಲ್ಲಾ ಹಾಗೂ ಬ್ಲಾಕ್ ಮಟ್ಟದ 1,000 ನಾಯಕರು ಆಪ್ ಸೇರಲಿದ್ದಾರೆ. ರಾಜ್ಯದ ಜನರಿಗಾಗಿ ಬಿಜೆಪಿ ಏನನ್ನೂ ಮಾಡುವುದಿಲ್ಲ ಎಂದು ಅವರು ಭಾವಿಸಿದ್ದಾರೆ. ಅವರು ಆಪ್ ಸೇರಲಿದ್ದಾರೆ’’ ಎಂದು ಅವರು ತಿಳಿಸಿದ್ದಾರೆ. ‘‘ಬಿಜೆಪಿಯ ಹಲವು ಪ್ರಮುಖ ನಾಯಕರು ಕೂಡ ನಮ್ಮಾಂದಿಗೆ ಸಂರ್ಪಕದಲ್ಲಿದ್ದಾರೆ. ಈಗ ರಾಜ್ಯದಲ್ಲಿ ಬಿಜೆಪಿ ಛಿದ್ರಗೊಂಡಿದೆ’’ ಎಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಸೋಡಿಯಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News