×
Ad

“ರಾಮ ದೇವರಲ್ಲ’’ ಎಂದ ಬಿಜೆಪಿ ಮಿತ್ರ ಪಕ್ಷದ ನಾಯಕ ಜಿತನ್ ರಾಮ್ ಮಾಂಝಿ

Update: 2022-04-15 15:19 IST

ಪಾಟ್ನಾ:  ಬಿಹಾರದಲ್ಲಿ ಬಿಜೆಪಿಯ  ಪ್ರಮುಖ ಮಿತ್ರ ಪಕ್ಷವು ಶ್ರೀರಾಮನ ಕುರಿತು ತನ್ನ ಹೇಳಿಕೆಯಿಂದ  ಆಡಳಿತ ಮೈತ್ರಿಕೂಟದಲ್ಲಿ ಹಲವರನ್ನು ದಿಗ್ಭ್ರಮೆಗೊಳಿಸಿದೆ.

"ನಾನು ಭಗವಾನ್ ರಾಮನನ್ನು ನಂಬುವುದಿಲ್ಲ. ರಾಮನು ದೇವರಲ್ಲ. ರಾಮನು ತುಳಸಿದಾಸ್  ಹಾಗೂ  ವಾಲ್ಮೀಕಿ ಅವರ ಸಂದೇಶವನ್ನು ಹರಡಲು ಸೃಷ್ಟಿಸಿದ ಪಾತ್ರವಷ್ಟೇ " ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಹೇಳಿದ್ದಾರೆ.

" ತುಳಸಿದಾಸ್  ಹಾಗೂ  ವಾಲ್ಮೀಕಿ ರಾಮಾಯಣವನ್ನು ಬರೆದಿದ್ದಾರೆ  ಹಾಗೂ  ಅವರ ಬರಹಗಳಲ್ಲಿ ಅನೇಕ ಉತ್ತಮ ಪಾಠಗಳಿವೆ. ನಾವು ಅದನ್ನು ನಂಬುತ್ತೇವೆ. ನಾವು ತುಳಸಿದಾಸ್ ಮತ್ತು ವಾಲ್ಮೀಕಿಯನ್ನು ನಂಬುತ್ತೇವೆಯೇ ಹೊರತು  ರಾಮನನ್ನಲ್ಲ," ಎಂದು ಮಾಂಝಿ ಹೇಳಿದರು. ಮಾಂಝಿ ಅವರ ಮಗ ಸಂತೋಷ್ ಮಾಂಝಿ ಬಿಹಾರದಲ್ಲಿ ನಿತೀಶ್ ಕುಮಾರ್-ಬಿಜೆಪಿ ಸರಕಾರದ ಸಂಪುಟದಲ್ಲಿದ್ದಾರೆ.

ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ ಡಿಎ) ಭಾಗವಾಗಿರುವ ಹಿಂದೂಸ್ತಾನ್ ಅವಾಮ್ ಮೋರ್ಚಾ (ಎಚ್‌ಎಎಂ) ಮುಖ್ಯಸ್ಥ ಮಾಂಝಿ ಅವರು ಭಾರತದ ಸಂವಿಧಾನವನ್ನು ರೂಪಿಸಿದ ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಈ ಜಗತ್ತಿನಲ್ಲಿ ಕೇವಲ ಎರಡು ಜಾತಿಗಳಿವೆ. ಅದುವೇ- ಶ್ರೀಮಂತ  ಹಾಗೂ  ಬಡವ. ಬ್ರಾಹ್ಮಣರು ದಲಿತರ  ವಿರುದ್ಧ ತಾರತಮ್ಯ ಮಾಡುತ್ತಿದ್ದಾರೆ ಎಂದು ಮಾಂಝಿ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News