ಕುಂದಾಪುರ ; ಬೈಕ್ ಢಿಕ್ಕಿ, ಸೈಕಲ್ ಸವಾರ ಮೃತ್ಯು
Update: 2022-04-15 21:35 IST
ಕುಂದಾಪುರ : ಬೈಕೊಂದು ಮುಖಾಮುಖಿ ಢಿಕ್ಕಿ ಹೊಡೆದ ಕಾರಣ ತೀವ್ರವಾಗಿ ಗಾಯಗೊಂಡ ಸೈಕಲ್ ಸವಾರ ಆಸ್ಪತ್ರೆಗೆ ಕರೆದೊಯ್ಯುವ ಹಾದಿ ಯಲ್ಲಿ ಮೃತಪಟ್ಟ ಘಟನೆ ಗುರುವಾರ ರಾತ್ರಿ ಕಟ್‌ಬೆಲ್ತೂರು ಗ್ರಾಮದ ಹರೇಗೋಡು ಕ್ರಾಸ್ ಬಳಿ ನಡೆದಿದೆ.
ಮೃತ ಸೈಕಲ್ ಸವಾರರನ್ನು ಚಾರ್ಲಿ ಮೆಂಡೋನ್ಸಾ ಎಂದು ಗುರುತಿಸಲಾಗಿದೆ. ಇವರು ಕಳೆದ ರಾತ್ರಿ ತಲ್ಲೂರು ಕಡೆಯಿಂದ ಹರೇಗೋಡು ಕಡೆಗೆ ಹೋಗುತಿದ್ದಾಗ ಬೈಂದೂರು ಕಡೆಯಿಂದ ಕುಂದಾಪುರದತ್ತ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಬೈಕ್ ಚಲಾಯಿಸಿಕೊಂಡು ಬಂದ ಹರ್ಷಿತ್ ಎಂಬಾತ, ಎದುರುಗಡೆಯಿಂದ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಚಾರ್ಲಿ ಅವರ ತಲೆ, ಸೊಂಟ, ಎದೆ, ಹೊಟ್ಟೆ ಹಾಗೂ ಕೈಕಾಲುಗಳಿಗೆ ತೀವ್ರ ಗಾಯವಾಗಿದ್ದು, ಆದರ್ಶ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುತಿದ್ದಾಗ ರಾತ್ರಿ ೯:೪೦ರ ಸುಮಾರಿಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.