ಜಾತಿ ಆಧಾರದಲ್ಲಿ ಜಾಮೀನು ನಿರಾಕರಿಸಿದ ಕೆಳ ನ್ಯಾಯಾಲಯದ ನ್ಯಾಯಾಧೀಶರಿಗೆ ಮಧ್ಯಪ್ರದೇಶ ಹೈಕೋರ್ಟ್ ಎಚ್ಚರಿಕೆ

Update: 2022-04-16 18:06 GMT
ಸಾಂದರ್ಭಿಕ ಚಿತ್ರ

ಭೋಪಾಲ್: ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸುವಾಗ ಆರೋಪಿಗಳ ಜಾತಿ ಆಧಾರದ ಮೇಲೆ ಮಾಡುವ ತಾರತಮ್ಯವನ್ನು ಗಂಭೀರವಾಗಿ ಪರಿಗಣಿಸಿದ ಮಧ್ಯಪ್ರದೇಶ ಹೈಕೋರ್ಟ್ ಕೆಳ ಹಂತದ ನ್ಯಾಯಾಲಯಕ್ಕೆ ಎಚ್ಚರಿಕೆಯನ್ನು ನೀಡಿದೆ ಎಂದು LiveLaw ವರದಿ ಮಾಡಿದೆ.

ಅರ್ಜಿದಾರನಿಗೆ ಜಾಮೀನು ನಿರಾಕರಿಸುವಲ್ಲಿ ಪೂರ್ವಾಗ್ರಹವನ್ನು ತೋರಿದ ಆರೋಪದ ಮೇಲೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಿಗೆ ಹೈಕೋರ್ಟ್ ಎಚ್ಚರಿಕೆ ನೀಡಿದೆ.

ನ್ಯಾಯಮೂರ್ತಿ ವಿವೇಕ್ ಅಗರವಾಲ್ ಅವರು ಕೆಳ ನ್ಯಾಯಾಲಯದ ನ್ಯಾಯಾಧೀಶರ ವರ್ತನೆಗೆ ತೀವ್ರ ಆಕ್ಷೇಪಣೆಯನ್ನು ವ್ಯಕ್ತಪಡಿಸಿ ಜಿಲ್ಲಾ ಸತ್ನಾದ ಮೈಹಾರ್‌ನ 1 ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಪ್ರಶಾಂತ್ ಶುಕ್ಲಾ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಎಚ್ಚರಿಕೆಯನ್ನು ಅವರ ಸೇವಾ ಪುಸ್ತಕದಲ್ಲಿ ದಾಖಲಿಸಲಾಗುವುದು, ಇದರಿಂದ ಅವರು ಭವಿಷ್ಯದಲ್ಲಿ ಹೆಚ್ಚು ಜಾಗರೂಕರಾಗಿ ಮತ್ತು ವಿವೇಕಯುತವಾಗಿ ನ್ಯಾಯಾಂಗದ ಚಿತ್ರಣವನ್ನು ಉಳಿಸಲು ಮತ್ತು ಜಾತೀಯತೆ ಮತ್ತು ಪೂರ್ವಾಗ್ರಹದ ಇಂತಹ ವರ್ತನೆಗಳನ್ನು ಪುನರಾವರ್ತಿಸಬಾರದೆಂದು ಹೈಕೋರ್ಟ್‌ ಹೇಳಿದೆ.

ಪ್ರಕರಣದ ಹಿನ್ನೆಲೆ

ಅರ್ಜಿದಾರನು ಪ್ರಕರಣವೊಂದರಲ್ಲಿ ಐಪಿಸಿ ಸೆಕ್ಷನ್ 380, 401, 414, 457 ಮತ್ತು 34 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧದ ಸಹ-ಆರೋಪಿಯಾಗಿದ್ದಾನೆ. ತನಗಿಂತ ಬಲವಾದ ಪ್ರಕರಣವನ್ನು ಹೊಂದಿರುವ ತನ್ನ ಸಹ-ಆರೋಪಿ ಜಾಮೀನು ಪಡೆದಿದ್ದು, ಕದ್ದ ಮಾಲನ್ನು ವಸೂಲಿ ಮಾಡಿದ ಹೊರತಾಗಿಯೂ ತನಗೆ ಜಾಮೀನು ನಿರಾಕರಿಸಲಾಗಿದೆ ಎಂದು ಅರ್ಜಿದಾರರು ಹೈಕೋರ್ಟ್‌ ನಲ್ಲಿ ಮನವಿ ಸಲ್ಲಿಸಿದ್ದರು.

ಅರ್ಜಿದಾರನು ಕೆಳ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು, ಆದರೆ ಅದನ್ನು ತಿರಸ್ಕರಿಸಲಾಯಿತು. ಕಳವಾದ ಸೊತ್ತನ್ನು ವಶಪಡಿಸಿಕೊಂಡ ಇನ್ನೊಬ್ಬ ಸಹ ಆರೋಪಿ ನೀಡಿದ ಮಾಹಿತಿಯ ಆಧಾರದ ಮೇಲೆ ಮೇಲ್ಕಂಡ ಅಪರಾಧಗಳನ್ನು ತನ್ನ ಮೇಲೆ ಹೊರಿಸಲಾಗಿದೆ ಎಂದು ಅರ್ಜಿದಾರ ಹೇಳಿದ್ದಾರೆ.

ಪ್ರಸ್ತುತ ಅರ್ಜಿದಾರರ ಜಾಮೀನು ಅರ್ಜಿಯಲ್ಲಿ, ಪ್ರಮುಖ ಆರೋಪಿ ಅಜಯ್ ಅಲಿಯಾಸ್ ಗುಡ್ಡು ಮಿಶ್ರಾಗೆ ಜಿಲ್ಲಾ ಸತ್ನಾದ ಒಂದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮೈಹರ್ ನ್ಯಾಯಾಲಯವು ಜಾತಿ ಆಧಾರದ ಮೇಲೆ ಜಾಮೀನು ನೀಡಿದೆ, ಕದ್ದ ಸೊತ್ತನ್ನು ಸಂಪೂರ್ಣವಾಗಿ ವಸೂಲಿ ಮಾಡಿದಾಗ್ಯೂ ತನ್ನ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಹೈಕೋರ್ಟ್‌ನಲ್ಲಿ ಅರ್ಜಿದಾರರು ಮನವಿಯನ್ನು  ಸಲ್ಲಿಸಿದ್ದರು. ಸಹ ಆರೋಪಿ ಅಜಯ್ ಮಿಶ್ರಾ ಅವರಿಂದ ಪಡೆದ ಮಾಹಿತಿಯ ಆಧಾರದ ಮೇಲೆ ತಮ್ಮನ್ನು(ಅರ್ಜಿದಾರರನ್ನು) ಆರೋಪಿಯನ್ನಾಗಿ ಮಾಡಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News