×
Ad

ಕೇವಲ 4 ದಿನಗಳಲ್ಲಿ ರೂ. 500 ಕೋಟಿ ಕಲೆಕ್ಷನ್ ದಾಟಿದ ಯಶ್ ಅಭಿನಯದ 'ಕೆಜಿಎಫ್ ಚಾಪ್ಟರ್ 2'

Update: 2022-04-18 13:29 IST
Photo: Twitter

ಬೆಂಗಳೂರು: ಯಶ್ ಅಭಿನಯದ 'ಕೆಜಿಎಫ್ ಚಾಪ್ಟರ್ 2' ಕೇವಲ ನಾಲ್ಕು ದಿನಗಳಲ್ಲಿ ವಿಶ್ವದಾದ್ಯಂತ ಬಾಕ್ಸಾಫೀಸ್ ಕಲೆಕ್ಷನ್‍ನಲ್ಲಿ ರೂ. 500 ಕೋಟಿ ಗಡಿ ದಾಟಿ ದಾಖಲೆ ಬರೆದಿದೆ.

ಈ ಕುರಿತು ಟ್ವೀಟ್ ಮಾಡಿರುವ ಮನೋಬಲ ವಿಜಯಬಾಲನ್, ಈ ಚಲನಚಿತ್ರ ಮೊದಲನೇ ದಿನ ರೂ. 165.37 ಕೋಟಿ, ಎರಡನೇ ದಿನ ರೂ. 139.25 ಕೋಟಿ, ಮೂರನೇ ದಿನ ರೂ. 115.08 ಕೋಟಿ ಹಾಗೂ ನಾಲ್ಕನೇ ದಿನ ರೂ. 132.13 ಕೋಟಿಯೊಂದಿಗೆ ಒಟ್ಟು ರೂ 551.83 ಕೋಟಿ ಬಾಚಿಕೊಂಡಿದೆ ಎಂದು ಬರೆದಿದ್ದಾರೆ.

ಕೇವಲ ಕೆಲವೇ ಕೆಲವು ಭಾರತೀಯ ಸಿನೆಮಾಗಳು ಮೊದಲ ವಾರಾಂತ್ಯದೊಳಗೆ ರೂ 81 ಕೋಟಿಗೂ ಅಧಿಕ ಹಣ ಬಾಚಿಕೊಂಡಿವೆ.

ಈ ಹಿಂದೆ  ಬಾಹುಬಲಿ 2, ಆರ್ ಆರ್ ಆರ್, ಪದ್ಮಾವತ್ ಮತ್ತು ಧೂಮ್ 3 ಚಲನಚಿತ್ರಗಳು ಈ ಸಾಧನೆ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News