×
Ad

‌ಸುಪ್ರೀಂಕೋರ್ಟ್‌ ನಿರ್ಧಾರ ನ್ಯಾಯದ ಭರವಸೆ ಮೂಡಿಸಿದೆ: ರಾಕೇಶ್ ಟಿಕಾಯತ್

Update: 2022-04-18 23:41 IST

ನೋಯ್ಡಾ, ಎ. 18: ಲಖಿಂಪುರಖೇರಿ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಷ್ ಮಿಶ್ರಾ ಅವರ ಜಾಮೀನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್ನ ನಿರ್ಧಾರ ರೈತರಲ್ಲಿ ನ್ಯಾಯದ ಭರವಸೆ ಮೂಡಿಸಿದೆ ಎಂದು ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು)ದ ನಾಯಕ ರಾಕೇಶ್ ಟಿಕಾಯತ್ ಸೋಮವಾರ ಹೇಳಿದ್ದಾರೆ.

ಉತ್ತರಪ್ರದೇಶ ಸರಕಾರ ಈಗ ನೊಂದ ರೈತರಿಗೆ ಭದ್ರತೆ, ಪರಿಹಾರ ಹಾಗೂ ನ್ಯಾಯ ಒದಗಿಸಲು ಕಾರ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು. ಅಮಾಯಕ ರೈತರನ್ನು ಜೈಲಿನಿಂದ ಹೊರಗೆ ತರಬೇಕು. ನ್ಯಾಯ ಸಿಗುವ ವರೆಗೆ ಹೋರಾಟ ಮುಂದುವರಿಯಲಿದೆ ಎಂದು ರಾಕೇಶ್ ಟಿಕಾಯತ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News