ರಾಮನವಮಿ ದಿನದ ಘರ್ಷಣೆಗಳಿಂದ ಸಂತ್ರಸ್ತರ ನೆರವಿಗೆ ಒಂದು ಕೋ.ರೂ.: ಮ.ಪ್ರ.ಸರಕಾರ

Update: 2022-04-19 16:59 GMT

ಭೋಪಾಲ, ಎ.19: ಮಧ್ಯಪ್ರದೇಶದ ಖರಗೋನ್ ಜಿಲ್ಲೆಯಲ್ಲಿ ಇತ್ತೀಚಿಗೆ ರಾಮನವಮಿ ಮೆರವಣಿಗೆ ಸಂದರ್ಭ ಸಂಭವಿಸಿದ್ದ ಘರ್ಷಣೆಗಳಿಂದ ಸಂತ್ರಸ್ತರಾದವರ ನೆರವಿಗಾಗಿ ಒಂದು ಕೋ.ರೂ.ಗಳನ್ನು ರಾಜ್ಯ ಸರಕಾರವು ಹಂಚಿಕೆ ಮಾಡಿದೆ.

ರಾಜ್ಯದಲ್ಲಿ ರಾಮನವಮಿ ದಿನ ಮೆರವಣಿಗೆಗಳ ಸಂದರ್ಭ ಹಿಂಸಾಚಾರಗಳು ಭುಗಿಲೆದ್ದಿದ್ದು,ಖರಗೋನ್ ಮತ್ತು ಬರ್ವಾನಿ ಜಿಲ್ಲೆಗಳಲ್ಲಿ ಹಲವರು ಗಾಯಗೊಂಡಿದ್ದರು.

ಖರಗೋನ್‌ನಲ್ಲಿ ಜಿಲ್ಲಾ ಎಸ್‌ಪಿ ಸಿದ್ಧಾರ್ಥ ಚೌಧರಿ ಸೇರಿದಂತೆ ಸಮಾರು 50 ಜನರು ಗಾಯಗೊಂಡಿದ್ದು,ಹಲವಾರು ಮನೆಗಳಿಗೆ ಹಾನಿಯನ್ನುಂಟು ಮಾಡಲಾಗಿತ್ತು ಮತ್ತು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. 40 ಕ್ಕೂ ಹೆಚ್ಚು ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿರುವ ಪೊಲೀಸರು 140ಕ್ಕೂ ಅಧಿಕ ಜನರನ್ನು ಬಂಧಿಸಿದ್ದಾರೆ.

ರಾಜ್ಯ ಸರಕಾರವು ಈ ಮೊದಲು ಹಿಂಸಾಚಾರದಿಂದ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರವನ್ನು ಪ್ರಕಟಿಸಿತ್ತು. ಮೃತಪಟ್ಟವರ ಅಥವಾ ತೀವ್ರವಾಗಿ ಗಾಯಗೊಂಡವರ ಕುಟುಂಬಕ್ಕೆ ನಾಲ್ಕು ಲ.ರೂ., ಅಂಗವಿಕಲರಾದವರಿಗೆ ಎರಡು ಲ.ರೂ.ಗಳ ಪರಿಹಾರವನ್ನು ಘೋಷಿಸಲಾಗಿತ್ತು. ಅಲ್ಲದೆ ಭಾಗಶಃ ಅಂಗವಿಕಲಗೊಂಡವರಿಗೆ 59,100 ರೂ. ಮತ್ತು ಸಣ್ಣಪುಟ್ಟ ಗಾಯಗೊಂಡವರಿಗೆ 25,000 ರೂ.ಪರಿಹಾರ ನೀಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News