ಯಶ್ ಅಭಿನಯದ 'ಕೆಜಿಎಫ್' ಗೆ ಸ್ಪೇನ್ ಫುಟ್ಬಾಲಿಗರೂ ಫಿದಾ!

Update: 2022-04-22 18:10 GMT

ಬೆಂಗಳೂರು: ಬಾಕ್ಸಾಫೀಸಿನಲ್ಲಿ ದಾಖಲೆ ಬರೆದಿರುವ ಯಶ್ ಅಭಿನಯದ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್: ಚಾಪ್ಟರ್ 2' ಸಿನೆಮಾ ವಿದೇಶಗಳಲ್ಲೂ ಭಾರೀ ಜನಪ್ರಿಯತೆ ಪಡೆದುಕೊಂಡಿದೆ.

ಇದೀಗ ಸ್ಪೇನ್‍ನ  'ಲಾಲಿಗಾ' ಫುಟ್ಬಾಲ್ ಲೀಲೀಗ್ ನಲ್ಲಿ ಆಡುತ್ತಿರುವ  ತನ್ನ ಮೂರು ತಾರಾ ಆಟಗಾರರಾದ ಕರೀಮ್ ಬೆನ್ಝೆಮಾ, ಗ್ರೀಝ್‍ಮನ್ನ್  ಮತ್ತು ಫೆರ್ರಾನ್ ಟೋರೆಸ್ ಅವರ ಚಿತ್ರಗಳನ್ನು ಪೋಸ್ಟ್ ಮಾಡಿ ಅವರನ್ನು ಅವರ ಹೆಸರುಗಳ ಮೊದಲ ಅಕ್ಷರಗಳಿಂದ ಉಲ್ಲೇಖಿಸಿ ಕೆಜಿಎಫ್ ಎಂದು ಬರೆದಿದ್ದಾರೆ.

ಇದಕ್ಕೂ ಮುಂಚೆ ಮ್ಯಾಂಚೆಸ್ಟರ್ ಸಿಟಿ ತನ್ನ ಅಧಿಕೃತ ಇನ್‍ಸ್ಟಾಗ್ರಾಂ ಪುಟದಲ್ಲಿ ತಂಡದ ಮೂರು ಪ್ರಮುಖ ಆಟಗಾರರಾದ ಕೆವಿನ್, ಗುಂಡೊ ಮತ್ತು ಫೋಡೆನ್ ಅವರ ಚಿತ್ರಗಳನ್ನು ಪೋಸ್ಟ್ ಮಾಡಿ ಅವರ ಹೆಸರುಗಳ ಮೊದಲ ಅಕ್ಷರಗಳನ್ನು ಬಳಸಿ ಕೆಜಿಎಫ್ ಎಂದು ಕರೆದಿದ್ದಾರೆ. ಈ ಚಿತ್ರಕ್ಕೆ "ನಮ್ಮ ಸ್ವಂತ ಕೆಜಿಎಫ್" ಎಂಬ ಶೀರ್ಷಿಕೆಯನ್ನೂ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News