ಸ್ನಾತಕೋತ್ತರ ಪದವಿ ಪರೀಕ್ಷೆ: ಮಿಲಾಗ್ರಿಸ್‌ ಕಾಲೇಜಿಗೆ ಎರಡು ರ‍್ಯಾಂಕ್

Update: 2022-04-22 13:58 GMT
ರೆನಿಟಾ, ಸ್ವಾತಿ ಪೂಜಾರಿ, ಅನುಷಾ

ಕಲ್ಯಾಣಪುರ : ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯ 2020-21ನೇ ಸಾಲಿನಲ್ಲಿ ನಡೆಸಿದ ಎಂ.ಕಾಂ. ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಎರಡು ರ‍್ಯಾಂಕ್ ಗಳನ್ನು ಪಡೆದಿದೆ.

ಕಾಲೇಜಿನ ರೆನಿಟಾ ಮತ್ತು ಸ್ವಾತಿ ಪೂಜಾರಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ ಗೊಂಡು ಕ್ರಮವಾಗಿ ಎರಡು ಮತ್ತು ಮೂರನೇ ರ‍್ಯಾಂಕ್ ಪಡೆದಿದ್ದಾರೆ.

ಅಲ್ಲದೇ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿನಿ ಅನುಷಾ ಫಿನಾನ್ಸಿಯಲ್ ಎಕೌಂಟಿಂಗ್ ವಿಷಯದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News