ಇಸ್ಲಾಮಿಕ್ ಸಾಮ್ರಾಜ್ಯ, ಶೀತಲ ಸಮರ ಕುರಿತ ಪಾಠ ಕೈಬಿಟ್ಟ ಸಿಬಿಎಸ್‍ಇ

Update: 2022-04-23 10:46 GMT

ಹೊಸದಿಲ್ಲಿ: ಅಲಿಪ್ತ ಆಂದೋಲನ, ಶೀತಲ ಸಮರ, ಆಫ್ರೋ-ಏಷ್ಯನ್ ಪ್ರಾಂತ್ಯಗಳಲ್ಲಿ ಇಸ್ಲಾಮಿಕ್ ಸಾಮ್ರಾಜ್ಯಗಳ ಉದಯ, ಮುಘಲ್ ದರ್ಬಾರ್  ವಿವರಗಳು ಹಾಗೂ ಕೈಗಾರಿಕಾ ಕ್ರಾಂತಿಯ ವಿಚಾರಗಳನ್ನು  11ನೇ ಮತ್ತು 12ನೇ ತರಗತಿಯ ಇತಿಹಾಸ ಮತ್ತು ರಾಜ್ಯಶಾಸ್ತ್ರ ಪಠ್ಯದಿಂದ ಸಿಬಿಎಸ್‍ಇ ತೆಗೆದು ಹಾಕಿದೆ.

ಅಂತೆಯೇ ಹತ್ತನೇ ತರಗತಿಯ ಪಠ್ಯದಿಂದ "ಕೃಷಿಯ ಮೇಲೆ ಜಾಗತೀಕರಣದ ಪರಿಣಾಮ" ಎಂಬ ವಿಷಯವನ್ನು 'ಆಹಾರ ಭದ್ರತೆ' ಅಧ್ಯಾಯದಿಂದ ಕೈಬಿಡಲಾಗಿದೆ. ಉರ್ದು ಕವಿ ಫೈಝ್ ಅಹ್ಮದ್ ಫೈಝ್ ಅವರ ಎರಡು ಕವನಗಳ ಅನುವಾದಿತ ಭಾಗಗಳನ್ನು "ಧರ್ಮ, ಕೋಮುವಾದ ಮತ್ತು ರಾಜಕೀಯ -  ಕೋಮುವಾದ, ಜಾತ್ಯತೀತ ದೇಶ" ವಿಭಾಗದಿಂದ ಈ ವರ್ಷ ಹೊರಗಿಡಲಾಗಿದೆ.

ಈ ವಿಷಯಗಳನ್ನು ಏಕೆ ಕೈಬಿಡಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಪಠ್ಯಕ್ರಮವನ್ನು ತರ್ಕಬದ್ಧಗೊಳಿಸಲು ಹಾಗೂ ಎನ್‍ಸಿಇಆರ್ಟಿ ಶಿಫಾರಸುಗಳಿಗೆ ತಕ್ಕಂತಿರಲು ಈ ಕ್ರಮಕೈಗೊಳ್ಳಲಾಗಿದೆ ಎಂದಿದ್ದಾರೆ.

ಹನ್ನೊಂದನೇ ತರಗತಿಯ ಇತಿಹಾಸ ಪಠ್ಯದಿಂದ ಇಸ್ಲಾಮಿಕ್ ಸಾಮ್ರಾಜ್ಯಗಳ ವಿವರವಿರುವ 'ಸೆಂಟ್ರಲ್ ಇಸ್ಲಾಮಿಕ್ ಲ್ಯಾಂಡ್ಸ್' ಅಧ್ಯಾಯವನ್ನು ಕೈಬಿಡಲಾಗಿದೆ. ಹನ್ನೆರಡನೇ ತರಗತಿ ಪಠ್ಯದಲ್ಲಿ ಮುಘಲ್ ಕೋರ್ಟ್-ರಿಕನ್‍ಸ್ಟ್ರಕ್ಟಿಂಗ್ ಹಿಸ್ಟರೀಸ್ ಥ್ರೂ ಕ್ರಾನಿಕಲ್ಸ್,'' ಕೈಬಿಡಲಾಗಿದೆ.

ಸಿಬಿಎಸ್‍ಇ ಕೆಲವೊಂದು ಪಾಠಗಳನ್ನು ಕೈಬಿಟ್ಟಿರುವುದು ಇದೇ ಮೊದಲ ಬಾರಿಯಲ್ಲ. 2020ರಲ್ಲಿ ತಾನು ಫೆಡರಲಿಸಂ, ಪೌರತ್ವ, ರಾಷ್ಟ್ರೀಯತೆ, ಜಾತ್ಯತೀತತೆ ಕುರಿತಾದ ಪಾಠಗಳನ್ನು 11ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯದಿಂದ ಕೈಬಿಡಲಾಗುವುದು ಎಂದು 2020ರಲ್ಲಿ ಸಿಬಿಎಸ್‍ಇ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News