​ಹಿರಿಯ ಚಿತ್ರಕಥೆ ರಚನೆಗಾರ ಜಾನ್ ಪೌಲ್ ಪುತ್ತುಸ್ಸೇರಿ ನಿಧನ

Update: 2022-04-24 04:19 GMT

ಕೊಚ್ಚಿ: ಸುಮಾರು ನೂರು ಚಿತ್ರಗಳಿಗೆ ಚಿತ್ರಕತೆ ಬರೆದ ಜಾನ್ ಪೌಲ್ ಪುತ್ತುಸ್ಸೇರಿ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.

ವಿವಿಧ ರೋಗಗಳಿಗೆ ಸಂಬಂಧಿಸಿ ಅವರು ಕಳೆದ ಎರಡು ತಿಂಗಳಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

 ಭರತನ್ ನಿರ್ದೇಶನದ ‘ಚಾಮರಂ’, ‘ಪಾಲಂಗಾಲ್’; ಬಾಲು ಮಹೇಂದರ್ ನಿರ್ದೇಶನದ ‘ಯಾತ್ರಾ’ದಂತಹ ಕ್ಲಾಸಿಕಲ್ ಚಲಚಿತ್ರಗಳಿಗೆ ಅವರು ಚಿತ್ರಕಥೆ ಬರೆದಿದ್ದರು.

1980ರ ‘ಚಾಮರಂ’ ಅವರು ಚಿತ್ರಕಥೆ ಬರೆದ ಮೊದಲ ಚಲನಚಿತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News