×
Ad

ದೇವಾಲಯ ಧ್ವಂಸವನ್ನು ʼಕೋಮುವಾದೀಕರಣಗೊಳಿಸಲುʼ ಯತ್ನಿಸಿದ ನಿರೂಪಕ ಅಮನ್‌ ಚೋಪ್ರ: ವ್ಯಾಪಕ ಆಕ್ರೋಶ

Update: 2022-04-24 12:07 IST

ಅಲ್ವಾರ್: ರಾಜಸ್ಥಾನದ ಅಲ್ವಾರ್ ಜಿಲ್ಲೆಯ ರಾಜ್‌ಗಢ್ ಪಟ್ಟಣದಲ್ಲಿ 300 ವರ್ಷಗಳಷ್ಟು ಹಳೆಯದಾದ ದೇವಾಲಯವನ್ನು ಕೆಡವಲಾಗಿದೆ. ಪಟ್ಟಣದಲ್ಲಿ ಅತಿಕ್ರಮಣ ವಿರೋಧಿ ಅಭಿಯಾನದ ವೇಳೆ ಇದನ್ನು ಮಾಡಲಾಗಿದ್ದು, ಇದರ ಭಾಗವಾಗಿ ಸುಮಾರು 150 ಅಂಗಡಿಗಳು ಮತ್ತು ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ.

ಕುತೂಹಲಕಾರಿ ಸಂಗತಿಯೆಂದರೆ, ಪ್ರತಿಪಕ್ಷ ಬಿಜೆಪಿ ವಿಷಯವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರಯತ್ನಿಸಿದರೂ, ರಾಜ್‌ಗಢ ಪುರಸಭೆಯನ್ನು ಬಿಜೆಪಿ ನಿಯಂತ್ರಿಸುತ್ತದೆ ಮತ್ತು ಅದರ ಮಂಡಳಿಯು ನಿರ್ಧಾರವನ್ನು ತೆಗೆದುಕೊಂಡಿದೆ ಎಂಬ ಅಂಶವನ್ನು ಕಾಂಗ್ರೆಸ್ ಗಮನ ಸೆಳೆದಿತ್ತು. ನೆಲಸಮ ಕಾರ್ಯಾಚರಣೆಗೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅದು ಪ್ರತಿಪಾದಿಸಿದೆ.

ಇದೇ ಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ಹನುಮ ಜಯಂತಿಯ ಸಂದರ್ಭದಲ್ಲಿ ಗಲಭೆ ಭುಗಿಲೆದ್ದಿತ್ತು. ಈ ಘಟನೆಯಲ್ಲಿ ಒಂಭತ್ತು ಮಂದಿ ಗಾಯಗೊಂಡಿದ್ದರು. ಈ ನಡುವೆ ನ್ಯೂಸ್‌ 18 ಹಿಂದಿ ನಿರೂಪಕ ಅಮನ್‌ ಚೋಪ್ರಾ, ರಾಜಸ್ಥಾನದ ಅಲ್ವಾರ್‌ ನಲ್ಲಿ ದೇವಾಲಯವನ್ನು ಧ್ವಂಸಗೊಳಿಸಿದ್ದು ಜಹಾಂಗೀರ್‌ಪುರಿಯ ಸೇಡು ಎಂದು ಹೇಳುವ ಮೂಲಕ ವ್ಯಾಪಕ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಅವರ ಹೇಳಿಕೆಯ ವೀಡಿಯೊ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ. 

ವೈರಲ್‌ ವೀಡಿಯೋದಲ್ಲಿ ಅವರು ʼಜಹಾಂಗೀರ್‌ಪುರಿ ವಾಲಾ ಬದ್ಲಾ, ಮಹಾದೇವ್‌ ಪೆ ಹಮ್ಲಾʼ ಎಂದು ಹೇಳುವುದು ದಾಖಲಾಗಿದೆ. ಈ ಮಧ್ಯೆ #ArrestAmanChopra ಟ್ರೆಂಡಿಂಗ್‌ ಆಗಿದೆ. ಇದೊಂದು ಅಪಾಯಕಾರಿ ಮತ್ತು ರಾಷ್ಟ್ರ ವಿರೋಧಿ ಹೇಳಿಕೆಯಾಗಿದ್ದು, ಅಮನ್‌ ಚೋಪ್ರಾ ವಿರುದ್ಧ ದೇಶದ್ರೋಹ ಕಾಯ್ದೆಯನ್ನು ಹೇರಬೇಕು ಎಂದು ಸಿನಿಮಾ ನಿರ್ಮಾಪಕ ಒನೀರ್‌ ಟ್ವೀಟ್‌ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News