​ಎಂ.ಎಫ್. ಹುಸೇನ್ ಪೇಂಟಿಂಗ್ ಖರೀದಿಸಲು ಪ್ರಿಯಾಂಕಾ ಗಾಂಧಿ ನನ್ನನ್ನು ಒತ್ತಾಯಿಸಿದ್ದರು: ಇಡಿಗೆ ತಿಳಿಸಿದ ರಾಣಾ ಕಪೂರ್

Update: 2022-04-24 07:10 GMT
ರಾಣಾ ಕಪೂರ್ (PTI)

ಮುಂಬೈ: ಎಂ.ಎಫ್. ಹುಸೇನ್ ಪೇಂಟಿಂಗ್ ಖರೀದಿಸಲು ಕಾಂಗ್ರೆಸ್ನ ಪ್ರಿಯಾಂಕಾ ಗಾಂಧಿ ವಾದ್ರಾ ನನ್ನನ್ನು ಒತ್ತಾಯಿಸಿದರು  ಹಾಗೂ ಪೈಂಟಿಂಗ್  ಮಾರಾಟದಿಂದ ಬಂದ ಹಣವನ್ನು ಕಾಂಗ್ರೆಸ್ ನ ಅಧ್ಯಕ್ಷೆ ಸೋನಿಯಾ ಗಾಂಧಿಗೆ ನ್ಯೂಯಾರ್ಕ್ ನಲ್ಲಿ  ವೈದ್ಯಕೀಯ ಚಿಕಿತ್ಸೆಗಾಗಿ ಗಾಂಧಿ ಕುಟುಂಬ ಬಳಸಿಕೊಂಡಿದೆ ಎಂದು ಯಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಪೂರ್ ಜಾರಿ ನಿರ್ದೇಶನಾಲಯಕ್ಕೆ (ಇಡಿ) ತಿಳಿಸಿದ್ದಾರೆಂದು ಇಲ್ಲಿನ ವಿಶೇಷ ನ್ಯಾಯಾಲಯದಲ್ಲಿ ಏಜೆನ್ಸಿ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ.

ಎಂ.ಎಫ್. ಹುಸೇನ್ ಪೇಂಟಿಂಗ್ ಅನ್ನು ಖರೀದಿಸಲು ನಿರಾಕರಿಸುವುದು ಗಾಂಧಿ ಕುಟುಂಬದೊಂದಿಗೆ ಸಂಬಂಧವನ್ನು ಬೆಳೆಸುವುದನ್ನು ಹಾಗೂ  ಪದ್ಮಭೂಷಣ ಪ್ರಶಸ್ತಿಯನ್ನು ಪಡೆಯುವುದನ್ನು ಕೂಡ ತಡೆಯುತ್ತದೆ ಎಂದು ಆಗ  ಪೆಟ್ರೋಲಿಯಂ ಸಚಿವರಾಗಿದ್ದ ಮುರಳಿ ದೇವೋರಾ ನನಗೆ ಹೇಳಿದ್ದರು ಎಂದು ಕಪೂರ್ ಇಡಿಗೆ ತಿಳಿಸಿದ್ದಾರೆ.

ಸೋನಿಯಾ ಗಾಂಧಿ ಅವರ ಆಪ್ತರಾಗಿದ್ದ ಅಹ್ಮದ್ ಪಟೇಲ್ ಅವರು ಸೋನಿಯಾ ಗಾಂಧಿಯವರ ವೈದ್ಯಕೀಯ ಚಿಕಿತ್ಸೆಗಾಗಿ ಸೂಕ್ತ ಸಮಯದಲ್ಲಿ ಗಾಂಧಿ ಕುಟುಂಬಕ್ಕೆ ಸಹಾಯ ಮಾಡುವ ಮೂಲಕ, ಕಪೂರ್, ಗಾಂಧಿ ಕುಟುಂಬಕ್ಕೆ ಒಳ್ಳೆಯ ಕಾರ್ಯವನ್ನು ಮಾಡಿದ್ದಾರೆ ಎಂದು ಹೇಳಿದ್ದರು ಎಂದು ಕಪೂರ್ ಇಡಿಗೆ ತಿಳಿಸಿದ್ದಾರೆ.

ಈ ಹೇಳಿಕೆಯು ಎಪ್ರಿಲ್ 2022 ರಲ್ಲಿ ಮುಂಬೈನಲ್ಲಿರುವ ವಿಶೇಷ ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆ್ಯಕ್ಟ್ (ಪಿಎಂಎಲ್ ಎ) ನ್ಯಾಯಾಲಯಕ್ಕೆ ಇಡಿ  ಸಲ್ಲಿಸಿದ ಪೂರಕ ಚಾರ್ಜ್ ಶೀಟ್ನಲ್ಲಿ  ಉಲ್ಲೇಖವಾಗಿದೆ. ‘ಹಿಂದುಸ್ತಾನ್ ಟೈಮ್ಸ್ ‘ಅದರ ಪ್ರತಿಯನ್ನು ಪರಿಶೀಲಿಸಿದ್ದು,  ಮುರಳಿ ದೆವೋರಾ ಹಾಗೂ  ಅಹ್ಮದ್ ಪಟೇಲ್ ಇಬ್ಬರೂ ದಿವಂಗತರಾಗಿರುವುದರಿಂದ ಕಪೂರ್ ಹೇಳಿಕೆಯನ್ನು ಪರಿಶೀಲಿಸಲು ಯಾವುದೇ ಮಾರ್ಗವಿಲ್ಲ ಎಂದು ವರದಿಯಲ್ಲಿ ಹೇಳಿದೆ. 

ಅದಾಗ್ಯೂ, ಕಪೂರ್ ಇದುವರೆಗೆ ಯಾವುದೇ ಪದ್ಮ ಪ್ರಶಸ್ತಿಯನ್ನು ಪಡೆದಿಲ್ಲ. ಆದರೆ, ಹುಸೇನ್ ಅವರು ಬಿಡಿಸಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಭಾವಚಿತ್ರದ ಪೇಂಟಿಂಗ್ ಮಾರಾಟದ ಬಗ್ಗೆ ದೃಢಪಡಿಸಲಾಗಿದೆ.

ರಾಣಾ ಕಪೂರ್, ಅವರ ಪತ್ನಿ, ಪುತ್ರಿಯರು, ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ (ಡಿಎಚ್ಎಫ್ಎಲ್) ಪ್ರವರ್ತಕ ಕಪಿಲ್ ವಾಧವನ್ ಹಾಗೂ  ಕೆಲವು ಯಸ್ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಡಿಸೆಂಬರ್ 2019 ರಲ್ಲಿ ಲಕ್ನೋ ಪೊಲೀಸರು ಡಿಎಚ್ಎಫ್ಎಲ್ ವಿರುದ್ಧ ದಾಖಲಿಸಿದ ವಂಚನೆ ಪ್ರಕರಣದ ಆಧಾರದ ಮೇಲೆ ಇಡಿ ತನ್ನ ಪ್ರಕ್ರಿಯೆಗಳನ್ನು ಆರಂಭಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News