ರಿಲಯನ್ಸ್ ನಿಂದ ಫ್ಯೂಚರ್ ಗ್ರೂಪ್ ನೊಂದಿಗಿನ 24,713 ಕೋ.ರೂ.ಗಳ ಒಪ್ಪಂದ ರದ್ದು

Update: 2022-04-25 05:53 GMT

ಹೊಸದಿಲ್ಲಿ,ಎ.24: ಫ್ಯೂಚರ್ ಗ್ರೂಪ್ ಜೊತೆ 2020,ಆಗಸ್ಟ್ನಲ್ಲಿ ತಾನು ಮಾಡಿಕೊಂಡಿದ್ದ 24,713 ಕೋ.ರೂ.ಗಳ ಒಪ್ಪಂದದಿಂದ ತಾನು ಹಿಂದೆ ಸರಿದಿರುವುದಾಗಿ ರಿಲಯನ್ಸ್ ಇಂಡಸ್ಟೀಸ್ ತಿಳಿಸಿದೆ. ಫ್ಯೂಚರ್ ಗ್ರೂಪ್ನ ಸುರಕ್ಷಿತ ಸಾಲದಾತರು ಅಥವಾ ಕಂಪನಿಯ ಆಸ್ತಿಗಳ ಅಡಮಾನವನ್ನು ಹೊಂದಿರುವ ಸಾಲದಾತರ ಆಕ್ಷೇಪಣೆ ತನ್ನ ನಿರ್ಧಾರಕ್ಕೆ ಕಾರಣವೆಂದು ರಿಲಯನ್ಸ್ ಶನಿವಾರ ಶೇರು ವಿನಿಮಯ ಕೇಂದ್ರಗಳಿಗೆ ಸಲ್ಲಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.

ಹಣಕಾಸು ಫಲಿತಾಂಶಗಳಂತೆ ಶೇರ್‌ ಹೋಲ್ಡರ್‌ ಗಳು ಮತ್ತು ಅಸುರಕ್ಷಿತ ಸಾಲದಾತರು ಫ್ಯೂಚರ್ ಗ್ರೂಪ್ನ ಸ್ವಾಧೀನ ಯೊಜನೆಯ ಪರವಾಗಿ ಮತಗಳನ್ನು ಚಲಾಯಿಸಿದ್ದಾರೆ,ಆದರೆ ಸುರಕ್ಷಿತ ಸಾಲದಾತರು ವಿರುದ್ಧವಾಗಿ ಮತಗಳನ್ನು ಚಲಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಜನೆಯ ಅನುಷ್ಠಾನವು ಸಾಧ್ಯವಾಗುವುದಿಲ್ಲ ಎಂದು ರಿಲಯನ್ಸ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News