ಕೋಮುಗಲಭೆಗಳಿಂದ ದಿಲ್ಲಿಯನ್ನು ರಕ್ಷಿಸಲು ಅಮಿತ್‌ ಶಾ ವಿಫಲರಾಗಿದ್ದಾರೆ: ಶರದ್‌ ಪವಾರ್‌ ಹೇಳಿಕೆ

Update: 2022-04-24 07:44 GMT

ಹೊಸದಿಲ್ಲಿ: ದಿಲ್ಲಿಯನ್ನು ಕೋಮುಗಲಭೆಗಳಿಂದ ರಕ್ಷಿಸುವಲ್ಲಿ ಗೃಹ ಸಚಿವ ಅಮಿತ್ ಶಾ ವಿಫಲರಾಗಿದ್ದಾರೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಶನಿವಾರ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.

ಏಪ್ರಿಲ್ 16 ರಂದು ವಾಯುವ್ಯ ದಿಲ್ಲಿಯ ಜಹಾಂಗೀರಪುರಿಯಲ್ಲಿ ನಡೆದ ಹನುಮಾನ್ ಜಯಂತಿ ಮೆರವಣಿಗೆಯಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಘರ್ಷಣೆಯಾದ ಒಂದು ವಾರದ ನಂತರ ಪವಾರ್ ಅವರ ಹೇಳಿಕೆಗಳು ಬಂದಿವೆ. ಹಿಂಸಾಚಾರದಲ್ಲಿ ಎಂಟು ಪೊಲೀಸರು ಮತ್ತು ನಾಗರಿಕರು ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಕನಿಷ್ಠ 24 ಶಂಕಿತರನ್ನು ಬಂಧಿಸಲಾಗಿದೆ.

"ಕೆಲವು ದಿನಗಳ ಹಿಂದೆ, ಕೋಮು ಉದ್ವಿಗ್ನತೆಯಿಂದಾಗಿ ದಿಲ್ಲಿ ಹೊತ್ತಿ ಉರಿಯುತ್ತಿತ್ತು. ದಿಲ್ಲಿಯ ಆಡಳಿತವನ್ನು ಅರವಿಂದ್ ಕೇಜ್ರಿವಾಲ್ [ಮುಖ್ಯಮಂತ್ರಿ] ನಿಯಂತ್ರಿಸುತ್ತಾರೆ, ಆದರೆ ಅದರ ಪೊಲೀಸರು ಅಮಿತ್ ಶಾ ನಿರ್ವಹಿಸುವ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಷಾ ನಗರವನ್ನು ಕೋಮುಗಲಭೆಗಳಿಂದ ರಕ್ಷಿಸಲು ವಿಫಲರಾಗಿದ್ದಾರೆ ಎಂದು ಪಶ್ಚಿಮ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ರ್ಯಾಲಿಯಲ್ಲಿ ಮಾತನಾಡುತ್ತಾ ಪವಾರ್ ಈ ಹೇಳಿಕೆ ನೀಡಿದ್ದಾರೆ.

ದಿಲ್ಲಿಯಲ್ಲಿ ಯಾವುದೇ ಘಟನೆ ನಡೆದಾಗ ಅದರ ಸಂದೇಶ ಜಗತ್ತಿಗೆ ಸಾರಲ್ಪಡುತ್ತದೆ ಎಂದು ಅವರು ಹೇಳಿದರು. ಅಂತಾರಾಷ್ಟ್ರೀಯ ನಾಯಕರೊಬ್ಬರು ಗುಜರಾತ್‌ಗೆ ಭೇಟಿ ನೀಡುತ್ತಿರುವುದು ನನಗೆ ಖುಷಿ ತಂದಿದೆ ಎಂದ ಪವಾರ್, "ಆದರೆ ಅದು ಅಂದಿನ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಿರಲಿ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆಗಿರಲಿ ಅಥವಾ ಯುಕೆ ಪ್ರಧಾನಿ [ಬೋರಿಸ್ ಜಾನ್ಸನ್] ಅವರ ಇತ್ತೀಚಿನ ಭೇಟಿಯಾಗಿರಲಿ, ಎಲ್ಲರನ್ನೂ ಗುಜರಾತ್‌ಗೆ ಕರೆದೊಯ್ಯಲಾಯಿತು ಮತ್ತು ಬೇರೆ ಯಾವುದೇ ರಾಜ್ಯಗಳಿಗೆ ಅಲ್ಲ." ಎಂದೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News