ಅಂಬೇಡ್ಕರ್ ಜಯಂತಿ ರ್ಯಾಲಿ ಮೇಲೆ ದಾಳಿ ಪ್ರಕರಣ:ಇನ್ನೂ ಬಜರಂಗ ದಳದ ಸದಸ್ಯರನ್ನು ಬಂಧಿಸದ ಪೊಲೀಸರು

Update: 2022-04-24 07:58 GMT
Photo: The Wire

ಹೊಸದಿಲ್ಲಿ:  ಒಡಿಶಾದಲ್ಲಿ ಇತ್ತೀಚೆಗೆ ನಡೆದ ಅಂಬೇಡ್ಕರ್ ಜಯಂತಿ ರ್ಯಾಲಿಯ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಈ ತನಕ ಬಜರಂಗ ದಳದ ಯಾವ ಸದಸ್ಯನನ್ನು ಬಂಧಿಸಲಾಗಿಲ್ಲ ಎಂದು The Wire ವರದಿ ಮಾಡಿದೆ.

ಎಪ್ರಿಲ್ 14 ರಂದು 131 ನೇ ಅಂಬೇಡ್ಕರ್ ಜಯಂತಿಯ ಅಂಗವಾಗಿ ಒಡಿಶಾದ ಬರ್ಗಢ್ ಪ್ರದೇಶದಾದ್ಯಂತ ಅಂಬೇಡ್ಕರ್ ವಾದಿಗಳು ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಭೀಮ್ ಆರ್ಮಿ ಆಯೋಜಿಸಿದ್ದ ರ್ಯಾಲಿಯಲ್ಲಿ ಕಾರ್ಮಿಕರು ಹಾಗೂ ರೈತರೇ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ಆದಾಗ್ಯೂ, ಮೆರವಣಿಗೆಯ ಮೇಲೆ ಬಜರಂಗದಳದ ಸದಸ್ಯರು ದಾಳಿ ಮಾಡಿದ್ದರು. ಇದರಿಂದಾಗಿ ಹಿಂಸಾಚಾರ  ನಡೆದಿದ್ದು ,ಕೆಲವರಿಗೆ ಗಾಯವಾಗಿದೆ. ಮೆರವಣಿಗೆಯಲ್ಲಿ ಭಾಗವಹಿಸಿದ್ದ ನಾಲ್ವರು ಗಾಯಗೊಂಡಿದ್ದು, 10ಕ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಗಿತ್ತು.

ಈ ಪ್ರಕರಣದಲ್ಲಿ  ಬಜರಂಗದಳದ ಕಾರ್ಯಕರ್ತರು ಭಾಗಿಯಾಗಿದ್ದನ್ನು ಗುರುತಿಸಲಾಗಿದ್ದರೂ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ. “ದಿ ವೈರ್‌’’ನೊಂದಿಗೆ ಮಾತನಾಡಿದ ಅಖಿಲ ಭಾರತ ವಕೀಲರ ಸಂಘದ ಪರ ವಕೀಲ ಮಧುಸೂದನ್, “ರ್ಯಾಲಿಗೆ ಅಡ್ಡಿಪಡಿಸಿದ ಸದಸ್ಯರ ಹೆಸರು ಸ್ಪಷ್ಟವಾಗಿರುವ ಹೊರತಾಗಿಯೂ ಪ್ರಕರಣದಲ್ಲಿ ಇದುವರೆಗೆ ಯಾವುದೇ ಬಂಧನವಾಗಿಲ್ಲ. ಇದಲ್ಲದೆ, ಅಂಬೇಡ್ಕರ್ವಾದಿಗಳು ರಾಜಿ ಮಾಡಿಕೊಳ್ಳಬೇಕು ಹಾಗೂ ಪರಿಹಾರವನ್ನು ಸ್ವೀಕರಿಸಬೇಕು ಎಂದು ಪೊಲೀಸರು ಹೇಳುತ್ತಿದ್ದಾರೆ; ಆದಾಗ್ಯೂ, ನಾವು ನ್ಯಾಯಕ್ಕಾಗಿ ನಮ್ಮ ಹೋರಾಟವನ್ನು ಮುಂದುವರಿಸುತ್ತಿದ್ದೇವೆ ಎಂದರು.

ಎಪ್ರಿಲ್ 14 ರಂದು ಭೀಮ್ ಆರ್ಮಿ ಹಾಗೂ  ಇತರ ಅಂಬೇಡ್ಕರ್ ಗುಂಪುಗಳು ಆಯೋಜಿಸಿದ್ದ ಬೈಕ್ ರ್ಯಾಲಿಗೆ ಭಜರಂಗ ದಳದ ಸದಸ್ಯರು ಅಡ್ಡಿಪಡಿಸಿದರು ಎಂದು ಆರೋಪಿಸಲಾಗಿದೆ.

ವಕೀಲ ಮಧುಸೂದನ್ ಪ್ರಕಾರ ಮಧ್ಯಾಹ್ನ 3 ಗಂಟೆಗೆ ಬಜರಂಗ ದಳದ ಸುಮಾರು 45 ಸದಸ್ಯರು ದೊಣ್ಣೆ, ಕತ್ತಿ ಝಳಪಿಸುತ್ತಾ ಸದಸ್ಯರ ಮೇಲೆ ಚೂರಿಯಿಂದ ಹಲ್ಲೆ ನಡೆಸಿದರು.  ಬಾಬಾಸಾಹೇಬರ ಪೋಸ್ಟರ್‌ಗಳನ್ನು ಹರಿದು ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News