×
Ad

ಕಾರ್ಕಳ: ನಿಂತಿದ್ದ ಕಾರಿಗೆ ಬಸ್ ಢಿಕ್ಕಿ; ಓರ್ವ ಮೃತ್ಯು

Update: 2022-04-24 21:35 IST

ಕಾರ್ಕಳ : ಬಸ್ಸೊಂದು ರಸ್ತೆ ಬದಿ ನಿಂತಿದ್ದ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಮತ್ತೋರ್ವ ಗಾಯಗೊಂಡ ಘಟನೆ ಕರಿಯ ಕಲ್ಲು ರುದ್ರಭೂಮಿಯ ಹತ್ತಿರ ರವಿವಾರ ನಡೆದಿದೆ.

ಮೃತರನ್ನು ಗದಗ ಮೂಲದ ಕಾರ್ಕಳ ಜೋಡುರಸ್ತೆಯ ಬಾಡಿಗೆ ಮನೆ ನಿವಾಸಿ ಗಿರೀಶ್ ಛಲವಾದಿ (38) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಕೃಷ್ಣ(22) ಎಂಬವರ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದಾರೆ.

ಗಿರೀಶ್ ಬಾವಿ ಕೆಲಸಕ್ಕಾಗಿ ಕೆಲಸದವರನ್ನು ತನ್ನ ಕಾರಿನಲ್ಲಿ ಜೋಡುರಸ್ತೆಯಿಂದ ಬಜಗೋಳಿಗೆ ಹೊರಟಿದ್ದು, ದಾರಿ ಮಧ್ಯೆ ಕಾರಿನ ಸೈಲೆನ್ಸರ್‌ನಲ್ಲಿ ಜಾಸ್ತಿ ಹೊಗೆ ಬರುತ್ತಿದ್ದುದನ್ನು ಗಮನಿಸಿ ನಿಲ್ಲಿಸಿದರು. ಗಿರೀಶ್ ಕಾರಿನ ಬಳಿ ನಿಂತುಕೊಂಡಿದ್ದರೆ,  ಕೃಷ್ಣ ಕಾರಿನ ಮುಂಭಾಗದಲ್ಲಿ ನಿಂತುಕೊಂಡಿದ್ದರು. ಈ ವೇಳೆ ಪುಲ್ಕೇರಿ ಕಡೆಯಿಂದ ಬಂದ ಬಸ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಇದರಿಂದ ಇವರಿಬ್ಬರು ಗಾಯಗೊಂಡಿದ್ದು, ಇದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗಿರೀಶ್ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News