×
Ad

ಮಹಾರಾಷ್ಟ್ರದ ಅಮರಾವತಿಯಲ್ಲಿ ಶಿವಸೇನೆ ನಾಯಕನ ಮೇಲೆ ದಾಳಿ, ಓರ್ವನ ಬಂಧನ

Update: 2022-04-24 23:56 IST
photo:twitter

ಅಮರಾವತಿ,ಎ.24: ಅಮರಾವತಿ ಜಿಲ್ಲೆಯ ವರೂಡ್‌ನಲ್ಲಿ ಶನಿವಾರ ಶಿವಸೇನೆ ನಾಯಕ ಯೋಗೇಶ ಘಾರಡ್ ಮೇಲೆ ನಡೆದಿದ್ದ ದಾಳಿಗೆ ಸಂಬಂಧಿಸಿದಂತೆ ಮೂವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದು,ಈ ಪೈಕಿ ಓರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ. ಇತರ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಘಾರಾಡ್ ಮೇಲೆ ದಾಳಿ ನಡೆದಿರುವಂತೆ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಹೆಚ್ಚುವರಿ ಎಸ್ಪಿ ಶಶಿಕಾಂತ ಸಾತವ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಶನಿವಾರ ರಾತ್ರಿ ವಾರೂಡ್ ನಗರದ ಮುಲ್ತಾಯಿ ಚೌಕ್‌ನಲ್ಲಿ ಬೈಕ್‌ನಲ್ಲಿ  ಬಂದಿದ್ದ ದುಷ್ಕರ್ಮಿಗಳು ಘಾರಾಡ್ ಅವರತ್ತ ಗುಂಡುಗಳನ್ನು ಹಾರಿಸಿದ್ದರು. ಗಂಭೀರವಾಗಿ ಗಾಯಗೊಂಡಿರುವ ಘಾರಾಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News