ಜೈಲಿನಿಂದ ಗೃಹಬಂಧನಕ್ಕೆ ಸ್ಥಳಾಂತರಿಸಿ ಎಂದು ಗೌತಮ್‌ ನವ್ಲಾಖ ಮಾಡಿದ ಮನವಿಯನ್ನು ತಿರಸ್ಕರಿಸಿದ ಹೈಕೋರ್ಟ್‌

Update: 2022-04-26 12:45 GMT

ಮುಂಬೈ: ಎಲ್ಗಾರ್‌ ಪರಿಷದ್‌ ಪ್ರಕರಣದ ಆರೋಪಿಯಾಗಿರುವ ಹೋರಾಟಗಾರ ಗೌತಮ್‌ ನವ್ಲಾಖ ಅವರು ತಮ್ಮನ್ನು ನವಿ ಮುಂಬೈಯ ತಲೋಜ ಕೇಂದ್ರ ಕಾರಾಗೃಹದಿಂದ ಗೃಹ ಬಂಧನದಲ್ಲಿ ನ್ಯಾಯಾಂಗ ಕಸ್ಟಡಿಯಲ್ಲಿರಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ಇಂದು ತಿರಸ್ಕರಿಸಿದೆ.  ತಮಗೆ ವೈದ್ಯಕೀಯ ಸೇವೆ ಮತ್ತು ಇತರ ಸವಲತ್ತುಗಳನ್ನು ಒದಗಿಸುತ್ತಿಲ್ಲ ಎಂದು ದೂರಿ ಅವರು ತಮ್ಮ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರು ತಮ್ಮ ಸಮಸ್ಯೆಯನ್ನು ವಿಶೇಷ ಎನ್‌ಐಎ ನ್ಯಾಯಾಲಯದ ಅಧಿಕಾರಿ ಮುಂದೆ ಹೇಳಿಕೊಳ್ಳಲು ಸ್ವತಂತ್ರರಾಗಿದ್ದಾರೆ. ಹಾಗೂ ಕಾನೂನಿನ ಪರಿಮಿತಿಯೊಳಗೆ ತಾವು ಅವರ ಸಮಸ್ಯೆ ಪರಿಹರಿಸಲು ಯತ್ನಿಸುವುದಾಗಿ  ಅಧಿಕಾರಿ ಹೇಳಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.

ಅರ್ಜಿದಾರರಿಗೆ ಸೂಕ್ತ ವೈದ್ಯಕೀಯ ಸವಲತ್ತುಗಳನ್ನು ಒದಗಿಸುವಂತೆಯೂ ತಲೋಜ ಕಾರಾಗೃಹದ ಅಧೀಕ್ಷಕರಿಗೆ ಜಸ್ಟಿಸ್‌ ಸುನಿಲ್‌ ಬಿ ಶುಕ್ರೆ ಹಾಗೂ ಜಸ್ಟಿಸ್‌ ಗೋವಿಂದ ಎ ಸನಪ್‌ ಅವರ ಪೀಠ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News