ರಾಮನವಮಿ ಹಿಂಸಾಚಾರ ಹಿನ್ನೆಲೆ: ಗುಜರಾತ್‌ ನ ಹಿಮ್ಮತ್‌ ನಗರದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ

Update: 2022-04-26 13:13 GMT

ಅಹ್ಮದಾಬಾದ್:‌ ಗುಜರಾತ್‌ನ ಹಿಮ್ಮತ್‌ನಗರದಲ್ಲಿ ಇತ್ತೀಚೆಗೆ ರಾಮನವಮಿಯಂದು ಹಿಂಸಾಚಾರ ನಡೆದ ಪ್ರದೇಶದ ಸಮೀಪದ ಛಪರಿಯಾ ಎಂಬಲ್ಲಿ ಇಂದು ಮುನಿಸಿಪಲ್‌ ಅಧಿಕಾರಿಗಳು ಅಕ್ರಮ ನಿರ್ಮಾಣಗಳ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ. ಪೊಲೀಸ್‌ ರಕ್ಷಣೆಯಲ್ಲಿ ತೆರವು ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿದೆ. ಇಂದಿನ ಕಾರ್ಯಾಚರಣೆ ವೇಳೆಗೆ ಇತ್ತೀಚಿಗಿನ ಹಿಂಸಾಚಾರ ಪ್ರಕರಣದ ಕೆಲ ಆರೋಪಿಗಳ ಮನೆ, ಮಳಿಗೆಗಳೂ ಸೇರಿವೆ ಎನ್ನಲಾಗಿದೆ.

ರಾಮನವಮಿ ಮೆರವಣಿಗೆ ವೇಳೆ ನಡೆದ ಹಿಂಸಾಚಾರದಲ್ಲಿ ಹಿಂದು ಮತ್ತು ಮುಸಲ್ಮಾನರು ಪರಸ್ಪರ ಕಲ್ಲೆಸತದಲ್ಲಿ ತೊಡಗಿಕೊಂಡಿದ್ದರಲ್ಲದೆ ಹಲವು ವಾಹನಗಳು ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹತ್ತು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆನಂದ್‌ ಜಿಲ್ಲೆಯ ಖಂಬಟ್‌ ನಗರದಲ್ಲಿ ನಡೆದ ಹಿಂಸಾಚಾರ ಪ್ರಕರಣದ ಆರೋಪಿಗಳಿಗೆ ಸೇರಿದ ಆಸ್ತಿಗಳನ್ನೂ ಅಲ್ಲಿನ ಆಡಳಿತ 11 ದಿನಗಳ ಹಿಂದೆ ಒತ್ತುವರಿ ತೆರವು ಕಾರ್ಯಾಚರಣೆ ಮೂಲಕ ನೆಲಸಮಗೊಳಿಸಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು.

ದಿಲ್ಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಇಂತಹುದೇ ತೆರವು ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್‌ ತಡೆ ಹೇರಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News