ಎ.29: ಶಾಂತಿ ಸಮಾನತೆಗಾಗಿ ʼಇಫ್ತಾರ್ ಮುಸ್ಸಂಜೆʼ ಕಾರ್ಯಕ್ರಮ
Update: 2022-04-26 20:15 IST
ಮಂಗಳೂರು : ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ ನೇತೃತ್ವದ ಱಸಹಕಾರ ನ್ಯಾಯ ಕೂಟ ಮಂಗಳೂರು ಇದರ ವತಿಯಿಂದ ಶಾಂತಿ ಸಮಾನತೆಗಾಗಿ ಱಇಫ್ತಾರ್ ಮುಸ್ಸಂಜೆ ಕಾರ್ಯಕ್ರಮವು ಎ.29ರ ಸಂಜೆ 5.15ಕ್ಕೆ ನಗರದ ಬಲ್ಮಠ ಸಹೋದಯ ಸಭಾಂಗಣದ ಹತ್ತಿರದ ಹೆಬಿಕ್ ತಾಂತ್ರಿಕ ತರಬೇತಿ ಸಂಸ್ಥೆಯ ಆವರಣದ ಱಆಲದ ಮರದಡಿಯಲ್ಲಿ ನಡೆಯಲಿದೆ.
ಅತಿಥಿಗಳಾಗಿ ಸುನ್ನಿ ಯುವಜನ ಸಂಘದ ರಾಜ್ಯಾಧ್ಯಕ್ಷ ಡಾ.ಎಂ.ಎಸ್.ಎಂ. ಝೈನಿ ಕಾಮಿಲ್, ರಾಮಕೃಷ್ಣ ಮಿಷನ್‌ನ ಸಂಯೋಜಕ ರಂಜನ್ ಬೆಳ್ಳರ್ಪಾಡಿ, ಸಿಎಸ್‌ಐ ಶಾಂತಿ ಕೆಥೆಡ್ರಲ್‌ನ ಸಭಾಪಾಲಕ ರೆ. ಎಂ. ಪ್ರಭು ರಾಜ್, ನಿವೃತ್ತ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಮತ್ತು ಕಾರ್ಯಕ್ರಮದ ಸಮನ್ವಯಕಾರರಾಗಿ ಗಾಂಧಿ ವಿಚಾರವೇದಿಕೆಯ ಅರವಿಂದ ಚೊಕ್ಕಾಡಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.