ಉದನೆ: ಮೀನುಗಳ ಮಾರಣಹೋಮ; ತೆಲಂಗಾಣ ಮೂಲದ ಮೂವರು ವಶಕ್ಕೆ

Update: 2022-04-27 16:19 GMT
ಸಾಂದರ್ಭಿಕ ಚಿತ್ರ

ಉಪ್ಪಿನಂಗಡಿ: ಮೀನುಗಾರಿಕೆಗೆ ನಿಷೇಧವಿರುವ ಉದನೆಯ ಗುಂಡ್ಯ ಹೊಳೆಯಲ್ಲಿ ಸ್ಫೋಟಕ ಬಳಸಿ ಮೀನು ಹಿಡಿಯಲು ಯತ್ನಿಸಿದ ಕೃತ್ಯದಿಂದಾಗಿ ನೂರಾರು ಮೀನುಗಳು ಸಾವನ್ನಪ್ಪಿದ್ದು, ಕೃತ್ಯವೆಸಗಿದ ತೆಲಂಗಾಣ ಮೂಲದ ಮೂವರನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ತೆಲಂಗಾಣ ಮೂಲದ ವೆಂಕಟೇಶ್, ರಾಮ,  ರಾಜು  ಎಂಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಗುಂಡ್ಯ ಹೊಳೆಯ ಉದನೆ ತೂಗು ಸೇತುವೆಯ ಬಳಿ ಮತ್ಸ್ಯ ತೀರ್ಥ ಎಂದೇ ಪರಿಗಣಿತವಾದ ಸ್ಥಳದಲ್ಲಿ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಈ ಸ್ಥಳದಲ್ಲಿ ಬುಧವಾರ ಏಕಾಏಕಿ ನೂರಾರು ಮೀನುಗಳು ಸಾವನ್ನಪ್ಪಿರುವುದು ಕಂಡು ಬಂದಿದ್ದು, ಹೊಳೆಗೆ ವಿಷ ಪ್ರಾಶಣ ಮಾಡಿರುವ ಬಗ್ಗೆ ಶಂಕೆ ಮೂಡಿದೆ.

ಈ ಬಗ್ಗೆ ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದ ಪೊಲೀಸರು ತೆಲಂಗಾಣ ಮೂಲದ ಮೂವರನ್ನು ವಿಚಾರಣೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News