×
Ad

ದಿಲ್ಲಿಯಲ್ಲಿ ಗರಿಷ್ಠ ತಾಪಮಾನ 44 ಡಿಗ್ರಿ ಸೆಲ್ಸಿಯಸ್‌ಗೆ ತಲುಪುವ ಸಾಧ್ಯತೆ: ಐಎಂಡಿ

Update: 2022-04-29 12:41 IST

ಹೊಸದಿಲ್ಲಿ: ದಿಲ್ಲಿಯಲ್ಲಿ  ತೀವ್ರವಾದ ಬಿಸಿಲ ಧಗೆ ಮುಂದುವರಿಯಲಿದ್ದು,  ಶುಕ್ರವಾರ ಗರಿಷ್ಠ ತಾಪಮಾನವು 44 ಡಿಗ್ರಿ ಸೆಲ್ಸಿಯಸ್‌ಗೆ ತಲುಪುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಎರಡು ಪಟ್ಟು 25.8 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದೆ.

“ಪಶ್ಚಿಮ ಮಧ್ಯಪ್ರದೇಶ, ವಿದರ್ಭ, ಜಮ್ಮು, ಪಂಜಾಬ್, ಹರ್ಯಾಣ-ಚಂಡೀಗಢ-ದಿಲ್ಲಿ, ಉತ್ತರ ಪ್ರದೇಶ, ರಾಜಸ್ಥಾನ, ಪೂರ್ವ ಮಧ್ಯಪ್ರದೇಶ, ಛತ್ತೀಸ್‌ಗಢ, ಬಿಹಾರ, ಜಾರ್ಖಂಡ್, ಗಂಗಾನದಿ ಪಶ್ಚಿಮ ಬಂಗಾಳದ ಪಶ್ಚಿಮದ ಕೆಲವು ಭಾಗಗಳಲ್ಲಿ ತೆಲಂಗಾಣ ಹಾಗೂ  ಒಡಿಶಾದಲ್ಲಿ  ಬಿಸಿಲ ಧಗೆ ಕಡಿಮೆಯಾಗಿದೆ" ಎಂದು ಐಎಂಡಿ  ಬೆಳಿಗ್ಗೆ 8:30 ಕ್ಕೆ ಬಿಡುಗಡೆ ಮಾಡಿದ ಬುಲೆಟಿನ್‌ನಲ್ಲಿ ತಿಳಿಸಿದೆ.

ಬೆಳಗ್ಗೆ 8.30ರ ವೇಳೆಗೆ ನಗರದಲ್ಲಿ ಆರ್ದ್ರತೆ ಶೇ.28ರಷ್ಟು ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಿರುಸಿನ ಉಷ್ಣದ  ಅಲೆಯು ದೇಶದ ವಿಶಾಲ ಪ್ರದೇಶಗಳಲ್ಲಿ ವ್ಯಾಪಿಸುತ್ತಿರುವ ಕಾರಣ ದಿಲ್ಲಿಯಲ್ಲಿ ಗುರುವಾರ 43.5 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದ್ದು, ಇದು  12 ವರ್ಷಗಳಲ್ಲಿ ಎಪ್ರಿಲ್ ತಿಂಗಳಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶವಾಗಿದೆ. ಎಪ್ರಿಲ್ 18, 2010 ರಂದು ರಾಷ್ಟ್ರ ರಾಜಧಾನಿಯಲ್ಲಿ ಗರಿಷ್ಠ ತಾಪಮಾನ 43.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News