×
Ad

ಉಡುಪಿ; ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಗೆ ಸುಮಾರು 34 ಲಕ್ಷ ರೂ. ವಂಚನೆ

Update: 2022-05-03 22:21 IST

ಉಡುಪಿ: ವಿದೇಶಗಳ ಕಂಪೆನಿಗಳಲ್ಲಿ ಒಳ್ಳೆಯ ಕೆಲಸ ಕೊಡಿಸುವುದಾಗಿ ನಂಬಿಸಿ ಬೆಂಗಳೂರಿನ ಧನಿರಾಮ್ ಕಂಪೆನಿಯಲ್ಲಿ ಕಲೆಕ್ಷನ್ ಎಕ್ಸಿಕ್ಯೂಟಿವ್ ಕೆಲಸದಲ್ಲಿದ್ದ ಕುಂದಾಪುರದ ಮೂಲದ ಯುವತಿಯನ್ನು ನಂಬಿಸಿದ ಅದೇ ಕಂಪೆನಿಯ ನೌಕರನೊಬ್ಬ ಆಕೆಯಿಂದ ಸುಮಾರು 34 ಲಕ್ಷ ರೂ. ಹಣವನ್ನು ಪಡೆದು ವಂಚಿಸಿರುವುದಾಗಿ ಯುವತಿ ಉಡುಪಿಯ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬಿಸಿಎ ಪದವೀಧರೆಯಾಗಿರುವ ಶಾಲಿನಿ ವಂಚನೆಗೊಳಗಾದ ಯುವತಿ.

ಶಾಲಿನಿ ಕೆಲಸದಲ್ಲಿದ್ದ ಧನಿರಾಮ್ ಕಂಪೆನಿಯಲ್ಲೇ ಕಲೆಕ್ಷನ್ ಎಕ್ಸಿಕ್ಯೂಟಿವ್ ಕೆಲಸದಲಿದ್ದ ಕೋಲಾರ ಜಿಲ್ಲೆಯ ಮಾಲೂರು ನಿವಾಸಿ ನಿತೀನ್‌ ಕುಮಾರ್ ವಂಚಿಸಿದ ಯುವಕನಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತಾನು ದುಬೈ ಹಾಗೂ ಅಮೆರಿಕದ ಪ್ರಮುಖ ಕಂಪೆನಿಯಲ್ಲಿ ಒಳ್ಳೆಯ ಕೆಲಸ ಕೊಡಿಸುವುದಾಗಿ ನಂಬಿಸಿ ಶಾಲಿನಿಯವರ ಹೆಸರಿನಲ್ಲಿರುವ ಕುಂದಾಪುರ ಯೂನಿಯನ್ ಬ್ಯಾಂಕ್ ಖಾತೆಯಿಂದ 22,63,999ರೂ., ಕೋರಮಂಗಳ ಶಾಖೆಯ ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ 5,85,000, ಶಾಲಿನಿ ಅವರ ತಂದೆ ಕೆ.ನರಸಿಂಹ ಪೂಜಾರಿ ಅವರ ಕುಂದಾಪುರದ ಎಸ್‌ಬಿಐ ಖಾತೆಯಿಂದ 5,16,302 ರೂ. ಸೇರಿದಂತೆ ಒಟ್ಟು 33,65,501 ರೂ.ನಗದು ಹಣವನ್ನು ತನ್ನ ಕೋರಮಂಗಲ ಶಾಖೆಯ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಗೆ ಮೊಬೈಲ್‌ನ ವಿವಿಧ ಆ್ಯಪ್ ಮೂಲಕ ವರ್ಗಾಯಿಸಿಕೊಂಡಿದ್ದು, ಪಿರ್ಯಾದಿದಾರರಿಗೆ ಕೆಲಸವನ್ನು ಕೊಡಿಸದೇ, ಹಣವನ್ನು ಹಿಂದಿರುಗಿಸದೇ ಆರೋಪಿ ನಿತೀಶ್‌ ಕುಮಾರ್ ನಂಬಿಕೆ ದ್ರೋಹ, ವಂಚನೆ ಹಾಗೂ ಮೋಸವನ್ನು ಎಸಗಿರುವುಗಾಗಿ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News