ಅಚಾನಕ್ಕಾಗಿ ಪತ್ರಕರ್ತರನ್ನು ಎದುರಿಸಿದ ಪ್ರಧಾನಿ ಮೋದಿ: ಟ್ರೆಂಡ್‌ ಆದ #Ohmygod

Update: 2022-05-06 07:25 GMT
Photo: Twitter

ಪ್ರಧಾನಿ ನರೇಂದ್ರ ಮೋದಿ ಅವರು ಮಾಧ್ಯಮ ಪ್ರತಿನಿಧಿಗಳನ್ನು ಎದುರಿಸಲು ಹಿಂದೇಟು ಹಾಕುವ ವಿಡಿಯೋ ವೈರಲ್ ಆಗಿದೆ. ಭಾರತದ ಪ್ರಧಾನಿ ತಮ್ಮ ಎಂಟು ವರ್ಷಗಳ ಅಧಿಕಾರಾವಧಿಯಲ್ಲಿ ಒಬ್ಬರೇ ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿಲ್ಲ. 

ಪ್ರಧಾನಿ ಮೋದಿ ಮಂಗಳವಾರ ಡೆನ್ಮಾರ್ಕ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಅನಿರೀಕ್ಷಿತವಾಗಿ ಎದುರುಗೊಂಡಿದ್ದಾರೆ. ಅದರ ವೀಡಿಯೊ ಈಗ ವೈರಲ್ ಆಗಿದೆ. ಪ್ರಧಾನಿ ಮೋದಿ ಅವರು ಡೆನ್ಮಾರ್ಕ್‌ನಲ್ಲಿ ಶೃಂಗಸಭೆಗೆ ತೆರಳುತ್ತಿದ್ದಾಗ ವರದಿಗಾರರ ಗುಂಪು ಮೋದಿಯನ್ನು ಸುತ್ತುವರೆದಿದ್ದು, ವರದಿಗಾರರ ಪ್ರಶ್ನೆಗಳಿಂದ ಇರಿಸು-ಮುರಿಸುಗೊಂಡ ಮೋದಿ ‘ಓ ಮೈ ಗಾಡ್’ ಎಂದು ಉದ್ಘರಿಸಿದ್ದು ವಿಡಿಯೋದಲ್ಲಿ ಕೇಳಬಹುದು. 
ಇದೀಗ, #OhMyGod ಹ್ಯಾಷ್‌ಟ್ಯಾಗ್‌ ನೊಂದಿಗೆ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್‌ನಲ್ಲಿದೆ. 
 
ಪ್ರಧಾನಮಂತ್ರಿ ಮೋದಿ ಪತ್ರಕರ್ತರ ಎದುರು ತಬ್ಬಿಬ್ಬುಗೊಂಡಿರುವುದನ್ನು ನೆಟ್ಟಿಗರು ಟ್ರೋಲ್‌ ಮಾಡುತ್ತಿದ್ದಾರೆ.

ವೈರಲ್ ಕ್ಲಿಪ್ ಅನ್ನು ಹಂಚಿಕೊಂಡ ಭಾರತೀಯ ಯೂತ್ ಕಾಂಗ್ರೆಸ್ (ಐವೈಸಿ) ಅಧ್ಯಕ್ಷ ಶ್ರೀನಿವಾಸ್ ಬಿವಿ ಪ್ರಧಾನಿಯನ್ನು ಗೇಲಿ ಮಾಡಿದ್ದು,  "ಟೆಲಿಪ್ರಾಂಪ್ಟರ್ ಇಲ್ಲದ ಜೀವನ” ಎಂದು ಬರೆದಿದ್ದಾರೆ. 

ಮತ್ತೊಬ್ಬ ಟ್ವಿಟರ್ ಬಳಕೆದಾರ, "ಮೋದಿ ಜೀ ಅವರು ಪತ್ರಿಕಾ ಮಾಧ್ಯಮದಿಂದ ಪ್ರಶ್ನೆಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳುವವರಿಗೆ ನಾಚಿಕೆಯಾಗಬೇಕು. ಇಂದು ಅವರು ಪತ್ರಿಕಾಗೋಷ್ಠಿಯಿಂದ ಕೆಲವು ಕಠಿಣ ಪ್ರಶ್ನೆಗಳನ್ನು ಎದುರಿಸಿದರು ಮತ್ತು  "ಓ ಮೈ ಗಾಡ್" ಎಂದು ಉತ್ತರಿಸಿದ್ದಾರೆ ಎಂದು ವ್ಯಂಗ್ಯವಾಗಿ ಬರೆದಿದ್ದಾರೆ. 

ಪತ್ರಕರ್ತೆ ಸಂಜುಕ್ತಾ ಬಸು, "#ohmyGod ಇನ್ನೂ ಟ್ರೆಂಡಿಂಗ್ ಆಗಿಲ್ಲವೇ? ಇದು ಮೋದಿಯವರ ಜೀವನದಲ್ಲಿ 'ದೋಸ್ತಿ ಬನಿ ರಹೇ' ನಂತರದ ಅತ್ಯಂತ ಮಹಾಕಾವ್ಯದ ಕ್ಷಣವಾಗಿದೆ. ಮೋದಿ ಅವರು ಇದ್ದಕ್ಕಿದ್ದಂತೆ ಮೈಕ್‌ನೊಂದಿಗೆ ಪ್ರಶ್ನೆಗಳನ್ನು ಕೇಳುವ ವರದಿಗಾರರಿಂದ ಸುತ್ತುವರೆದರು. ಭಯಭೀತರಾದ ಮೋದಿ ಓ ಮೈ ಗಾಡ್ ಎಂದು ಹೇಳಿದ್ದಾರೆ” ಎಂದು ಬರೆದಿದ್ದಾರೆ

ಟಿಆರ್‌ಎಸ್‌ನ ಸಾಮಾಜಿಕ ಮಾಧ್ಯಮ ಸಂಚಾಲಕ ವೈ ಸತೀಶ್ ರೆಡ್ಡಿ, ವೀಡಿಯೊವನ್ನು ಉಲ್ಲೇಖಿಸಿ, "ಶ್ರೀ ಮೋದಿ ಜಿ ಸಂಪೂರ್ಣವಾಗಿ ಭಯಭೀತರಾಗಿದ್ದಾರೆ. ಯೋಜಿತವಲ್ಲದ ಮಾಧ್ಯಮ ಸಂವಾದವನ್ನು ಎದುರಿಸಿದ ನಂತರ #OhMyGod ಪ್ರತಿಕ್ರಿಯಿಸುತ್ತಾರೆ. ಒಂದು ವೇಳೆ ಅವರು ಲೈವ್ ಪಿಸಿಯನ್ನು ಎದುರಿಸಬೇಕಾಗಿ ಬಂದಿದ್ದರೆ ಊಹಿಸಿ " ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News