376ಡಿಬಿ ಪರಿಚ್ಛೇದದ ಸಾಂವಿಧಾನಿಕ ಸಿಂಧುತ್ವ: ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

Update: 2022-05-13 18:29 GMT

ಹೊಸದಿಲ್ಲಿ, ಮೇ 13: ಭಾರತೀಯ ದಂಡ ಸಂಹಿತೆಯ 376ಡಿಬಿ ಪರಿಚ್ಛೇದದ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯೊಂದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಕೆಂದ್ರ ಸರಕಾರದ ಪ್ರತಿಕ್ರಿಯೆ ಕೋರಿದೆ.

ಈ ಪರಿಚ್ಛೇದದಡಿ 12 ವರ್ಷಕ್ಕಿಂತ ಕೆಳಗಿನ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸುವ ಪ್ರಕರಣದ ದೋಷಿಗಳು ತಮ್ಮ ಉಳಿದ ಜೀವಿತಾವಧಿಯನ್ನು ಜೈಲಿನಲ್ಲೇ ಕಳೆಯವ ಶಿಕ್ಷೆಯನ್ನು ವಿಧಿಸಬಹುದಾಗಿದೆ.

32ನೇ ಪರಿಚ್ಛೇದದನ್ವಯ ಸುಪ್ರೀಂ ಕೊರ್ಟ್‌ಗೆ ಹೋದ ಅರ್ಜಿದಾರನು 376ಡಿಬಿ ಪರಿಚ್ಛೇದದಡಿ ಸಾಯುವವರೆಗೆ ಜೈಲಿನಲ್ಲಿರುವ ಶಿಕ್ಷೆಗೆ ಗುರಿಯಾದ ಓರ್ವ ದೋಷಿಯಾಗಿದ್ದಾನೆ.

ವಕೀಲ ಗೌರವ್ ಅಗ್ರವಾಲ್ ಮೂಲಕ ಸಲ್ಲಿಕೆಯಾದ ಅರ್ಜಿಗೆ ಸಂಬಂಧಿಸಿ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಸೂರ್ಯ ಕಾಂತ್ ಅವರನ್ನೊಳಗೊಂಡ ಪೀಠವು ಕೇಂದ್ರ ಸರಕಾರಕ್ಕೆ ನೋಟಿಸ್ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News