×
Ad

ದಿಲ್ಲಿ ವಾಣಿಜ್ಯ ಕಟ್ಟಡದಲ್ಲಿ ಅಗ್ನಿ ದುರಂತ: ಮಾಲಕನನ್ನು ಬಂಧಿಸಿದ ಪೊಲೀಸರು

Update: 2022-05-15 14:54 IST
Photo: PTI

ಹೊಸದಿಲ್ಲಿ: ಶುಕ್ರವಾರದಂದು ಸಂಭವಿಸಿದ ಭಾರೀ ಅಗ್ನಿ ದುರಂತದಲ್ಲಿ 27 ಮಂದಿ ಬಲಿಯಾದ ಪಶ್ಚಿಮ ದಿಲ್ಲಿಯ ಕಟ್ಟಡದ ಮಾಲೀಕರನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿದ್ದ ಮನೀಶ್ ಲಾಕ್ರಾ ವಿರುದ್ಧ ಪ್ರಕರಣ ದಾಖಲಾಗಿದೆ. ಇಂದು ಬೆಳಗ್ಗೆ ಲಾಕ್ರಾರನ್ನು ಬಂಧಿಸಲಾಯಿತು.

ಮನೀಷ್ ಲಾಕ್ರಾ ಹಾಗೂ  ಅವರ ಕುಟುಂಬ ಕಟ್ಟಡದ ಮೇಲಿನ ಮಹಡಿಯಲ್ಲಿ ವಾಸವಾಗಿತ್ತು.  ಬೆಂಕಿ ಹೊತ್ತಿಕೊಂಡ ನಂತರ  ಕ್ರೇನ್ ಸಹಾಯದಿಂದ ಕೆಳಗಿಳಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾಷಣಕಾರ ಕೈಲಾಶ್ ಜ್ಞಾನಿ ಹಾಗೂ  ಅವರ ಮಗ ಅಮನ್ ಜ್ಯಾನಿ ಬೆಂಕಿಯಲ್ಲಿ ಸಾವನ್ನಪ್ಪಿದರು. ಗುರುಗ್ರಾಮದ ನಿವಾಸಿ ಕೈಲಾಶ್ ಜ್ಞಾನಿ ಕಟ್ಟಡದ ಎರಡನೇ ಮಹಡಿಯಲ್ಲಿ ಭಾಷಣ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲಿ ಹಲವಾರು ಜನರಿದ್ದರು. ಹೆಚ್ಚಿನ ಸಾವುಗಳು ಅಲ್ಲಿಯೇ ಸಂಭವಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News