×
Ad

ಶರದ್ ಪವಾರ್ ವಿರುದ್ಧ ಪೋಸ್ಟ್ ಹಾಕಿದ್ದಕ್ಕೆ ಬಿಜೆಪಿ ನಾಯಕನಿಗೆ ಕಪಾಳಮೋಕ್ಷ ಮಾಡಿದ ಎನ್ ಸಿಪಿ ಕಾರ್ಯಕರ್ತ

Update: 2022-05-15 15:11 IST
Photo:twitter

ಮುಂಬೈ: ಪಕ್ಷದ ಮುಖ್ಯಸ್ಥ ಹಾಗೂ  ಹಿರಿಯ ರಾಜಕಾರಣಿ ಶರದ್ ಪವಾರ್ ವಿರುದ್ಧ ಕಾಮೆಂಟ್ ಪೋಸ್ಟ್ ಮಾಡಿದ್ದಕ್ಕಾಗಿ ಮಹಾರಾಷ್ಟ್ರ ರಾಜ್ಯ ಬಿಜೆಪಿ ವಕ್ತಾರ ವಿನಾಯಕ್ ಅಂಬೇಕರ್ ಅವರನ್ನು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ ಸಿಪಿ) ಕಾರ್ಯಕರ್ತರು ಕಪಾಳಮೋಕ್ಷ ಮಾಡಿದ್ದಾರೆ. ದಾಳಿಯ ವಿಡಿಯೋವನ್ನು ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಹಂಚಿಕೊಂಡಿದ್ದಾರೆ.

"ಮಹಾರಾಷ್ಟ್ರ ಪ್ರದೇಶ ಭಾರತೀಯ ಜನತಾ ಪಕ್ಷದ ವಕ್ತಾರ ವಿನಾಯಕ್ ಅಂಬೇಕರ್ ಅವರ ಮೇಲೆ ಎನ್‌ಸಿಪಿ ಗೂಂಡಾಗಳು ಹಲ್ಲೆ ನಡೆಸಿದ್ದಾರೆ ಹಾಗೂ  ಬಿಜೆಪಿ ಪರವಾಗಿ ನಾನು ಈ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ. ಈ ಎನ್‌ಸಿಪಿ ಗೂಂಡಾಗಳನ್ನು ತಕ್ಷಣವೇ ಕ್ರಮ ಕೈಗೊಳ್ಳಬೇಕು" ಎಂದು ಮರಾಠಿಯಲ್ಲಿ ಪಾಟೀಲ್ ಟ್ವೀಟಿಸಿದ್ದಾರೆ.

ಕೆಲವು ಪುರುಷರು ಆಸನದಲ್ಲಿ ಕುಳಿತಿರುವ ಅಂಬೇಕರ್ ಅವರೊಂದಿಗೆ ವಾಗ್ವಾದ ನಡೆಸುತ್ತಿರುವುದನ್ನು ವೀಡಿಯೊದಲ್ಲಿ ಕಂಡುಬಂದಿದ್ದು,ಇದರ ಮಧ್ಯೆ ವ್ಯಕ್ತಿಯೊಬ್ಬ ಅಂಬೇಕರ್ ಗೆ ಕಪಾಳಮೋಕ್ಷ ಮಾಡಿದ್ದಾನೆ.

ಶನಿವಾರ, ಪವಾರ್ ಅವರ ಬಗ್ಗೆ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹಂಚಿಕೊಂಡ ಆರೋಪದ ಮೇಲೆ ಮರಾಠಿ ನಟಿ ಕೇತಕಿ ಚಿತಾಲೆ ಹಾಗೂ  ವಿದ್ಯಾರ್ಥಿ ನಿಖಿಲ್ ಭಾಮ್ರೆ ಅವರನ್ನು ಬಂಧಿಸಲಾಯಿತು.

ಇಂದು ಮಹಾರಾಷ್ಟ್ರದ ನ್ಯಾಯಾಲಯವು ನಟಿಯನ್ನು  ಮೇ 18 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News