ಮೇ ತಿಂಗಳ ಮೊದಲಾರ್ಧದಲ್ಲೇ ಭಾರತೀಯ ಸ್ಟಾಕ್‌ ಮಾರ್ಕೆಟ್‌ ನಿಂದ 25,200 ಕೋಟಿ ರೂ. ಹಿಂದೆಗೆದ ವಿದೇಶಿ ಹೂಡಿಕೆದಾರರು

Update: 2022-05-15 13:09 GMT

ಮುಂಬೈ: ಮೇ ತಿಂಗಳ ಮೊದಲ ಹದಿನೈದು ದಿನಗಳ ಅವಧಿಯಲ್ಲೇ ಭಾರತೀಯ ಸ್ಟಾಕ್‌ ಮಾರುಕಟ್ಟೆಯಿಂದ 25,200 ಕೋಟಿ ರೂ.ಗೂ ಅಧಿಕ ಮೊತ್ತವನ್ನು ವಿದೇಶಿ ಹೂಡಿಕೆದಾರರು ಹಿಂಪಡೆದಿದ್ದು, ಜಾಗತಿಕವಾಗಿ ಬಡ್ಡಿದರದ ಹೆಚ್ಚಳ ಮತ್ತು ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಕುರಿತ ಕಳವಳದಿಂದಾಗಿ ವಿದೇಶಿ ಹೂಡಿಕೆದಾರರು ಭಾರತೀಯ ಷೇರುಗಳ ನಿರಂತರ ಮಾರಾಟವನ್ನು ಮುಂದುವರಿಸಿದ್ದಾರೆ ಎಂದು businesstoday.in ವರದಿ ಮಾಡಿದೆ.

"ಹೆಚ್ಚುತ್ತಿರುವ ಕಚ್ಚಾತೈಲ ಬೆಲೆಗಳು, ಏರುತ್ತಿರುವ ಹಣದುಬ್ಬರ, ಬಿಗಿಯಾದ ಹಣಕಾಸು ನೀತಿ ಮುಂತಾದವುಗಳ ಸೂಚ್ಯಂಕಗಳ ಮೇಲೆ ಪರಿಣಾಮ ಬೀರುವುದರೊಂದಿಗೆ, ಜಾಗತಿಕವಾಗಿಯೂ ಹಣದುಬ್ಬರ ಹೆಚ್ಚಾಗುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ಕಾರಣದಿಂದ ಹೂಡಿಕೆದಾರರು ಚಿಂತಿತರಾಗಿದ್ದು, ಆದ್ದರಿಂದ ಸದ್ಯಕ್ಕೆ ವಿದೇಶಿ ಬಂಡವಾಳಗಳ ಹರಿವು ಅಸ್ಥಿರವಾಗಿ ಉಳಿಯುವ ಸಾಧ್ಯತೆಯಿದೆ" ಎಂದು ಕೊಟಕ್‌ ಸೆಕ್ಯೂರಿಟೀಸ್‌ ನ ಇಕ್ವಿಟಿ ರಿಸರ್ಚ್‌ (ಚಿಲ್ಲರೆ) ಮುಖ್ಯಸ್ಥ ಶ್ರೀಕಾಂತ್‌ ಚೌಹಾಣ್‌ ಹೇಳಿಕೆ ನೀಡಿದ್ದಾಗಿ ವರದಿ ಉಲ್ಲೇಖಿಸಿದೆ.

ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) 2022 ರ ಏಪ್ರಿಲ್‌ವರೆಗೆ ಏಳು ತಿಂಗಳವರೆಗೆ ನಿವ್ವಳ ಮಾರಾಟಗಾರರಾಗಿ ಉಳಿದಿದ್ದು, ಈಕ್ವಿಟಿಗಳಿಂದ 1.65 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿನ ನಿವ್ವಳ ಮೊತ್ತವನ್ನು ಹಿಂತೆಗೆದುಕೊಂಡಿದ್ದಾರೆ. "ಮಾರುಕಟ್ಟೆಯ ಹೊರಗಡೆ ಮತ್ತು ಒಳಗಡೆಯ ಶಾಖದ ಅಲೆಗಳು ಹೂಡಿಕೆದಾರರನ್ನು ಬೆವರುವಂತೆ ಮಾಡಿರುವ ಕಾರಣ ಮುಂಬರುವ ವಾರಗಳಲ್ಲೂ ವಿದೇಶಿ ಬಂಡವಾಳಗಳ ಮಾರಾಟ ಮುಂದುವರಿಯಲಿದೆ" ಎಂದು ಟ್ರೇಡ್‌ಸ್ಮಾರ್ಟ್‌ನ ಅಧ್ಯಕ್ಷ ವಿಜಯ್ ಸಿಂಘಾನಿಯಾ ಹೇಳಿದರು.

ಎಫ್‌ಪಿಐ (ವಿದೇಶಿ ಹೂಡಿಕೆಗಳು) ಹರಿವುಗಳು ಮೇ ತಿಂಗಳಲ್ಲಿ ಋಣಾತ್ಮಕವಾಗಿಯೇ ಮುಂದುವರಿದಿವೆ ಮತ್ತು ಮೇ 2-13 ರ ಅವಧಿಯಲ್ಲಿ ಸುಮಾರು 25,216 ಕೋಟಿ ರೂ.ಗಳ ಶೇರನ್ನು ಮಾರಾಟ ಮಾಡಿಲಾಗಿದೆ ಎಂದು ಠೇವಣಿದಾರರ ಅಂಕಿಅಂಶಗಳು ತೋರಿಸಿದ್ದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News