ಉಡುಪಿ: ಮೇ 22 ಯಕ್ಷ ಸಾಧಕ ಪ್ರಶಸ್ತಿ ಪ್ರದಾನ

Update: 2022-05-18 13:53 GMT

ಉಡುಪಿ : ಯಕ್ಷಗಾನ ಕಲಾರಂಗ ಉಡುಪಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಯಕ್ಷಗಾನದ ಶಿಷ್ಟ ಸಾಧಕರಿಗೆ ನೀಡುವ ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ನೆನಪಿನ ಯಕ್ಷಸಾಧಕ ಪ್ರಶಸ್ತಿ ಪ್ರದಾನ ಸಮಾರಂಭ ಮೇ 22ರ ರವಿವಾರ ಸಂಜೆ 5.15ಕ್ಕೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಪನ್ನಗೊಳ್ಳಲಿದೆ. 

ಪರ್ಯಾಯ ಶ್ರೀಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥರು  ತಾರಾನಾಥ ವರ್ಕಾಡಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಸಿದ್ಧ ವೈದ್ಯರೂ, ಯಕ್ಷಗಾನ ಪೋಷಕರೂ ಆದ ಡಾ. ಪದ್ಮನಾಭ ಕಾಮತರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಹಿರಿಯ ಸ್ತ್ರೀವೇಷಧಾರಿ ಬೇಗಾರು ಶಿವಕುಮಾರ ಅಭಿನಂದನಾ ಭಾಷಣ ಮಾಡಲಿದ್ದು, ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಡಾ.ತಲ್ಲೂರು ಶಿವರಾಮ ಶೆಟ್ಟಿ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಅಪರಾಹ್ನ 2 ಗಂಟೆಯಿಂದ ‘ಯಕ್ಷಗಾನಾಕಾಶದ ತಾರಾನಾಥ’ ಶೀರ್ಷಿಕೆಯಲ್ಲಿ ಪ್ರಶಸ್ತಿ ಪುರಸ್ಕೃತರ ಬಹುಮುಖಿ ವ್ಯಕ್ತಿತ್ವವನ್ನು ಪರಿಚಯಿಸುವ ಕಾರ್ಯಕ್ರಮವಿದ್ದು, ಇದನ್ನು ಹಿರಿಯ ಯಕ್ಷಗಾನ ಕಲಾವಿದ ಗೋವಿಂದ ಭಟ್ ಉದ್ಘಾಟಿಸಲಿದ್ದಾರೆ. ‘ಯುಗಳ ತಾಳಮದ್ದಲೆ’ ವಿಚಾರಗೋಷ್ಠಿ ಹಾಗೂ ತಾರಾನಾಥರಿಂದ ನೃತ್ಯ ಪ್ರಾತ್ಯಕ್ಷಿಕೆ ನಡೆಯಲಿದೆ.

ಹಿರಿಯ ಯಕ್ಷಗಾನ ವಿದ್ವಾಂಸ ಡಾ.ಮೋಹನ ಕುಂಟಾರು ಅಧ್ಯಕ್ಷತೆಯಲ್ಲಿ ನಡೆಯುವ ವಿಚಾರಗೋಷ್ಠಿಯಲ್ಲಿ ಗಾಯತ್ರಿ ಉಡುಪ ಕಿನ್ನಿಗೋಳಿ, ಯೋಗಿಶ ರಾವ್ ಚಿಗುರುಪಾದೆ, ಶಾಂತಾರಾಮ ಕುಡ್ವ ಉಪನ್ಯಾಸ ನೀಡಲಿದ್ದಾರೆ. ಕಲಾವಿದ, ಪ್ರಸಂಗಕರ್ತ, ಲೇಖಕ, ಪತ್ರಕರ್ತ ತಾರಾನಾಥ ವರ್ಕಾಡಿ ಇವರಿಗೆ ಪ್ರಶಸ್ತಿಯೊಂದಿಗೆ ೪೦,೦೦೦ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಯಕ್ಷಗಾನ ಕಲಾರಂಗದ ಪತ್ರಿಕಾ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News