ಕ್ವಾಡ್ ಶೃಂಗಸಭೆಗಾಗಿ ಜಪಾನ್‌ಗೆ ತೆರಳಲಿರುವ ಪ್ರಧಾನಿ ಮೋದಿ: 40 ಗಂಟೆಗಳಲ್ಲಿ 23 ಕಾರ್ಯಕ್ರಮಗಳು

Update: 2022-05-21 18:20 GMT

ಹೊಸದಿಲ್ಲಿ,ಮೇ 21: ಪ್ರಧಾನಿ ನರೇಂದ್ರ ಮೋದಿಯವರು ಮೇ 24ರಂದು ನಡೆಯಲಿರುವ ಕ್ವಾಡ್ ಶೃಂಗಸಭೆಗಾಗಿ ಜಪಾನಿಗೆ ಭೇಟಿ ನೀಡಲಿದ್ದು,ತನ್ನ ವಾಸ್ತವ್ಯದ 40 ಗಂಟೆಗಳ ಅವಧಿಯಲ್ಲಿ ಮೂವರು ವಿಶ್ವನಾಯಕರೊಂದಿಗೆ ಮಾತುಕತೆ ಸೇರಿದಂತೆ 23 ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಮೋದಿಯವರು ತನ್ನ ಭೇಟಿಯ ಸಂದರ್ಭದಲ್ಲಿ ವ್ಯವಹಾರ, ರಾಜತಾಂತ್ರಿಕ ಮಾತುಕತೆಗಳನ್ನು ನಡೆಸಲಿದ್ದಾರೆ. ಅವರು ಕನಿಷ್ಠ 36 ಜಪಾನಿ ಸಿಇಒಗಳು ಮತ್ತು ಭಾರತೀಯ ಸಮುದಾಯದೊಂದಿಗೂ ಸಂವಾದಗಳನ್ನು ನಡೆಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿದವು.ಮೋದಿಯವರು ಒಂದು ರಾತ್ರಿಯನ್ನು ಟೋಕಿಯೊದಲ್ಲಿ ಮತ್ತು ಎರಡು ರಾತ್ರಿಗಳನ್ನು ವಿಮಾನದಲ್ಲಿ ಕಳೆಯಲಿದ್ದಾರೆ.ಮೋದಿ ಅಮೆರಿಕದ ಅಧ್ಯಕ್ಷ ಜೋ ಬೈಡೆನ್,ಜಪಾನಿನ ಪ್ರಧಾನಿ ಫುಮಿಯೊ ಕಿಷಿಡಾ ಹಾಗೂ ಆಸ್ಟ್ರೇಲಿಯಾದ ಪ್ರಧಾನಿಗಳ ಜೊತೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News